ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ? - Mahanayaka
11:06 AM Wednesday 4 - December 2024

ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?

kings bar
24/08/2021

ಬಾಗಲಕೋಟೆ:  ಗ್ರಾಮದ ಮಹಿಳೆಯರ ವಿರೋಧದ ನಡುವೆಯೂ ಕೊನೆಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಓಪನ್ ಆಗಿದೆ. ದೂರದ ಊರಿಗೆ ಹೋಗಿ ಕುಡಿದು ಊರಿಗೆ ಬರುವಷ್ಟರಲ್ಲಿ ಕುಡಿದ ನಶೆ ಇಳಿದು ಹೋಗುತ್ತಿತ್ತು ಎನ್ನುತ್ತಿದ್ದ ಕುಡುಕರಿಗೆ ,ಸಮೀಪದಲ್ಲಿಯೇ ಬಾರ್ ತೆರೆದಾಗ ಮನೆಯ ಬಾಗಿಲಲ್ಲೇ ಸ್ವರ್ಗದ ಬ್ರಾಂಚ್ ತೆರೆದಷ್ಟು ಸಂತೋಷವಾಗಿತ್ತು. ಅದೇ ಖುಷಿಯಲ್ಲಿಂದು ಬಾರ್ ಗೆ ಕುಡಿಯಲು ಆಗಮಿಸಿದ ವೇಳೆ ವೀರವನಿತೆಯರ ಗುಂಪು ಬಾರ್ ಮುಂದೆ ನಿಂತಿರುವುದನ್ನು ಕಂಡು ಕುಡುಕ ಮಹಾಶಯರು ಬೆಚ್ಚಿ ಬಿದ್ದಿದ್ದಾರೆ.

ಈ ಘಟನೆ ನಡೆದಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚನ್ನಾಳ ಗ್ರಾಮದಲ್ಲಿ. ಸ್ಥಳೀಯರ ವಿರೋಧವಿದ್ದರೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಓಪನ್ ಆಗಿತ್ತು. ಈ ಸಂಬಂಧ ಇಲ್ಲಿನ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೂ ತೆರಳಿ ಈ ಸಂಬಂಧ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದರು.

ಜಿಲ್ಲಾಧಿಕಾರಿಗಳು ಏನಾದರೂ ಮಾಡಿ ಬಾರ್ ನ್ನು ಮುಚ್ಚಿಸುತ್ತಾರೆ ಎಂದು ಮಹಿಳೆಯರು ಕಾದು ಸುಸ್ತಾಗಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಬಾರ್ ತೆರವುಗೊಳಿಸಲು ಅಸಮರ್ಥರು, ಬಾರ್ ತೆರವು ಮಾಡುವ ಸಾಮರ್ಥ್ಯವಿಲ್ಲದೇ ಮಹಿಳೆಯರಿಗೆ ಸುಳ್ಳು ಹೇಳಿ ಕಳುಹಿಸಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆಯೇ ಮಹಿಳೆಯರ ಆಕ್ರೋಶ ಹೊರ ಬಿದ್ದಿದೆ.

ಇಂದು ಬಾರ್ ಮುಂದೆ ಜಮಾಯಿಸಿದ ಮಹಿಳೆಯರು ಕುಡಿಯಲು ಬಂದಿದ್ದ ಗ್ರಾಮಸ್ಥರಿಗೆ ತಮಗೆ ಗೊತ್ತಿರುವ ಭಾಷೆಯಲ್ಲಿ ಛೀಮಾರಿ ಹಾಕಿದ್ದಾರೆ. ಹೀಗಾಗಿ ಬಾರ್ ಮುಂದೆ ಬರಲು ಗ್ರಾಮದ ಕುಡುಕ ಮಹಾಶಯರು ಅಂಜುವಂತಾಗಿದೆ.

ಗ್ರಾಮದ ಯುವಕರು, ಬಾಲಕರು ಕುಡಿತಕ್ಕೆ ದಾಸರಾಗುತ್ತಾರೆ ಎಂದು ಮಹಿಳೆಯರು ಭಯಭೀತರಾಗಿದ್ದಾರೆ. ಆದರೆ, ಇಲ್ಲಿ ತೆರೆಯಲಾಗಿರುವ ಕಿಂಗ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಮಹಿಳೆಯರು ಸತತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಬಾಗಲಕೋಟೆ ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳದೇ, ಕಿಂಗ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಮಂಡಿಯೂರಿ ಕುಳಿತು ತನ್ನ  ಅಸಮರ್ಥತೆ ತೋರಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

 

ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?

ತಾಲಿಬಾನ್ ನ 10ಕ್ಕೂ ಅಧಿಕ ಉಗ್ರರಿಗೆ ಚಟ್ಟಕಟ್ಟಿದ ಅಫ್ಘಾನ್ ನ ಪಂಜ್ ಶೇರ್ ಚಳುವಳಿಗಾರರು

ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್

ಸಿಎಂ ಭೇಟಿಗೆ ದೇವಸ್ಥಾನದಿಂದಲೇ ಬಂದ ದೇವಿ | ಕೊನೆಗೆ ನಡೆದದ್ದೇನು ಗೊತ್ತಾ?

ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್ | 6 ವರ್ಷಗಳ ಕಾಲ ಅನರ್ಹರಾಗುವ ಸಾಧ್ಯತೆ

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

ಫುಡ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರು ಸಜೀವ ದಹನ

ಇತ್ತೀಚಿನ ಸುದ್ದಿ