ಹೊಸದಾಗಿ ಆರಂಭಗೊಂಡ ಬಾರ್ ಗೆ ಮಹಿಳೆಯರು ನುಗ್ಗಿದರು, ಕೆಲ ಕಾಲದಲ್ಲಿ ಬಾರ್ ಧ್ವಂಸ! - Mahanayaka
11:52 AM Wednesday 12 - March 2025

ಹೊಸದಾಗಿ ಆರಂಭಗೊಂಡ ಬಾರ್ ಗೆ ಮಹಿಳೆಯರು ನುಗ್ಗಿದರು, ಕೆಲ ಕಾಲದಲ್ಲಿ ಬಾರ್ ಧ್ವಂಸ!

28/02/2021

ಕಡಲೂರು: ಹೊಸದಾಗಿ ಸರ್ಕಾರ ತೆರೆದ ಮದ್ಯದಂಗಡಿಗೆ ನುಗ್ಗಿದ ಮಹಿಳೆಯರು ಮದ್ಯದಂಗಡಿಯನ್ನು ಧ್ವಂಸಗೊಳಿಸಿ ಘಟನೆ ತಮಿಳುನಾಡಿನ ಕಡಲೂರಿನ ಕುರಿಂಜಿಪಾಡಿ ಗ್ರಾಮದಲ್ಲಿ ನಡೆದಿದೆ,

ಇಲ್ಲಿನ ಗೋಡಂಬಿ, ಅಡಿಕೆ ಫಾರ್ಮ್ ಬಳಿಯಲ್ಲಿ  ಹೊಸದಾಗಿ ಸರ್ಕಾರ ಮದ್ಯದಂಗಡಿ ತೆರೆದಿದೆ. ಇದೇ ಮಾರ್ಗದಲ್ಲಿ ಹೊಲಕ್ಕೆ ಕೆಲಸಕ್ಕೆ ಹೋಗುವ ಪುರುಷರನ್ನು ಗಮನದಲ್ಲಿಟ್ಟುಕೊಂಡು  ಈ ಬಾರ್ ತೆಗೆಯಲಾಗಿದೆ.

ಇಲ್ಲಿ ಬಾರ್ ತೆರೆಯ ಬಾರದು ಎಂದು ಹಲವು ಬಾರಿ ಮಹಿಳೆಯರು ಮನವಿ ಮಾಡಿದ್ದರೂ ಬಾರ್ ತೆರೆಯಲಾಗಿದೆ. ಪುರುಷರು ಕಂಠಮಟ್ಟ ಕುಡಿದು ಬಂದು ಮನೆಯಲ್ಲಿ ರಾದ್ದಾಂತ ನಡೆಸುತ್ತಾರೆ. ಮನೆಯ ನೆಮ್ಮದಿ ಎಲ್ಲವೂಗುತ್ತದೆ. ಅದನ್ನು ಸಹಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಯೋಚಿಸಿದ ಮಹಿಳೆಯರು ಬಾರ್ ಗೆ ನೇರವಾಗಿ ನುಗ್ಗಿ ಬಾಟಲಿಗಳನ್ನು ಹೊಡೆದು ಹಾಕಿದ್ದಾರೆ.


Provided by

ಇಲ್ಲಿ ಬಾರ್ ತೆರೆಯುವುದರಿಂದ ನಮ್ಮ ಮನೆಗಳಲ್ಲಿ ಹೆಂಗಸರು ಮತ್ತು ಮಕ್ಕಳು ಬದುಕಲು ಸಾಧ್ಯವಿಲ್ಲ. ನಾವು ಎಷ್ಟು ಬಾರಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ಕೇಳಿಲ್ಲ. ಹೀಗಾಗಿ ಮದ್ಯದಂಗಡಿಯನ್ನು ಧ್ವಂಸ ಮಾಡಿದ್ದೇವೆ ಎಂದು ಮಹಿಳೆಯರು ತಿಳಿಸಿದ್ದಾರೆ.

whatsapp

ಇತ್ತೀಚಿನ ಸುದ್ದಿ