ಭಾರೀ ಪ್ರಮಾಣದ ಹಿಮಕುಸಿತ; ಭಾರತೀಯ ಸೇನೆಯಿಂದ 30 ನಾಗರಿಕರ ರಕ್ಷಣೆ

ನವದೆಹಲಿ: ಹಿಮಪಾತ ಮತ್ತು ಭಾರೀ ಪ್ರಮಾಣದ ಹಿಮಕುಸಿತದಿಂದ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್‌ದಾರ್- ಚೌಕಿಬಾಲ್ ಹೆದ್ದಾರಿಯ ಖೂನಿ ನಾಲಾ ಮತ್ತು ಎಸ್.ಎಂ.ಹಿಲ್ ಬಳಿ ಹಿಮದಲ್ಲಿ ಸಿಲುಕಿಕೊಂಡಿದ್ದ 30 ನಾಗರಿಕರನ್ನು ಭಾರತೀಯ ಸಶಸ್ತ್ರ ಪಡೆ ರಕ್ಷಿಸಲಾಗಿದೆ.
ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಸೈನಿಕರು ನಡೆಸಿದ ಸುಮಾರು 5-6 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 30 ನಾಗರಿಕರು ಜೀವಂತವಾಗಿ ಬದುಕುಳಿದಿದ್ದಾರೆ. ಮಂಗಳವಾರ ಬೆಳಗ್ಗೆ ಹಿಮದಿಂದ ಪ್ರಚೋದಿತವಾದ ಹಿಮಕುಸಿತದಿಂದ ತಂಗ್ ಧರ್-ಚೌಕಿಬಾಲ್ ರಸ್ತೆ ಬಂದ್ ಆಗಬೇಕಾಯಿತು. ಪರಿಣಾಮ 1 ಮಗು ಸೇರಿದಂತೆ 30 ನಾಗರಿಕರು ತಮ್ಮ ವಾಹನಗಳೊಂದಿಗೆ ಸಿಲುಕಿಕೊಂಡಿದ್ದರು.
ಸ್ಥಳೀಯ ಅಧಿಕಾರಿಗಳ ಪ್ರಕಾರ, ನಾಗರಿಕರು ಮತ್ತು ಅವರ ವಾಹನಗಳು ಹಿಮದಲ್ಲಿ ಸಿಲುಕಿರುವ ಬಗ್ಗೆ ಎನ್‌ಸಿ ಪಾಸ್ ನಲ್ಲಿದ್ದ ಸೈನಿಕರಿಗೆ ಮಾಹಿತಿ ತಲುಪಿತ್ತು. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಪ್ರಯಾಣಿಕರಿಂದ ತುಂಬಿರುವ ವಾಹನಗಳ ಬಗ್ಗೆ ಮಾಹಿತಿ ಪಡೆದ ನಂತರ ಭಾರತೀಯ ಸೇನೆಯ 2 ಹಿಮಪಾತ ರಕ್ಷಣಾ ತಂಡಗಳು ಮತ್ತು ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ ತಂಡವನ್ನು ಸಜ್ಜುಗೊಳಿಸಲಾಯಿತು. ಕ್ಯಾಪ್ಟನ್ ಕುಲ್ಜೋತ್ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ
ತಮಿಳುನಾಡು: ನದಿಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು, ಇಬ್ಬರ ರಕ್ಷಣೆಐಎನ್ ಎಸ್ ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ನೌಕಾ ಸಿಬ್ಬಂದಿ ಸಾವು
ಕೊವಿಡ್ ಗೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಲಿ
ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ: 40 ಮಂದಿಯ ವಿರುದ್ಧ ಕೇಸ್!
ನರಗುಂದದಲ್ಲಿ ಮುಸ್ಲಿಮ್ ಯುವಕನ ಹತ್ಯೆ ಪ್ರಕರಣ: ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ