ಬರೀ ಟ್ವೀಟ್ ಮಾಡಿದರೆ ಪಕ್ಷ ಉಳಿಯಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ  ಮೊಯ್ಲಿ ಕಿಡಿ - Mahanayaka
10:29 PM Wednesday 11 - December 2024

ಬರೀ ಟ್ವೀಟ್ ಮಾಡಿದರೆ ಪಕ್ಷ ಉಳಿಯಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ  ಮೊಯ್ಲಿ ಕಿಡಿ

veerappa moily
15/03/2022

ಪಂಚ ರಾಜ್ಯದ ಪಲಿತಾಂಶದಿಂದ  ಬೇಸತ್ತ ಕಾಂಗ್ರೆಸಿನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಕಾಂಗ್ರೆಸ್ಸಿನ ನಾಯಕರು ಸಾಮಾಜಿಕ ಜಾಲತಾಣದಲ್ಲಿ  ಕೇವಲ ಟ್ವೀಟ್‌ ಮಾಡಿಕೊಂಡು ಇರುವ ಸಂಸ್ಕೃತಿ ಬೆಳೆಸಿಕೊಂಡರೆ ಅದರಿಂದ ಪಕ್ಷ ಉದ್ಧಾರವಾಗದು ಮತ್ತು ತಕ್ಷಣವೇ ಅವಕಾಶವಾದಿಗಳಿಂದ  ಸೋನಿಯಾ ಗಾಂಧಿ ಪಕ್ಷದ ಜವಾಬ್ದಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದರು.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೊಯ್ಲಿ, ‘ಅವಕಾಶವಾದಿಗಳು ಸಂಘಟನೆಯನ್ನು ಆವರಿಸಿಕೊಂಡಿರುವ ಕಾರಣ, ಇತ್ತೀಚಿನ ದಿನಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬಲಿಪಶುವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ‘ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ಕೂಡಲೇ ನಮ್ಮ ಕೆಲ ಹಿರಿಯ ನಾಯಕರು ನೀಡಿದ ಹೇಳಿಕೆಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಸೋಲಿಗಿಂತ ನನಗೆ ಇಂಥ ಹೇಳಿಕೆಗಳೇ ಹೆಚ್ಚು ಆತಂಕ ಮೂಡಿಸಿವೆ ಎಂದು ವೀರಪ್ಪ ಮೊಯ್ಲಿ ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ  ನಾಯಕರ ಬದಲಾವಣೆ ಆಗಬೇಕು ಎಂದು ಸಲ್ಲಿಸಲಾದ ಮನವಿಗೆ ನಾನು ಕೂಡ ಸಹಿ ಹಾಕಿದ್ದು ನಿಜ. ಆದರೆ ಅದು ಪಕ್ಷದ ಹಿರಿಯ ನಾಯಕರ ವಿರುದ್ಧ ಅಲ್ಲ ಈ ಕಾರಣಕ್ಕಾಗಿಯೇ ನಾನು ಅವರಿಂದ ದೂರವಾದೆ ಎಂದು ಜಿ 23ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರಧ್ವಜಕ್ಕೆ ಸರಣಿ ಅವಮಾನ

ನಾಳೆಯಿಂದಲೇ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು ತರಗತಿಗೆ ಬರಲಿ: ಶಾಸಕ ರಘುಪತಿ ಭಟ್

ವಿಪರೀತ ಶಾಖದಲ್ಲಿ ದೇಹವನ್ನು ತಂಪಾಗಿಸಲು ಏನು ಕುಡಿಯಬೇಕು?  ಏನು ತಪ್ಪಿಸಬೇಕು?

ವಿಪರೀತ ಶಾಖದಲ್ಲಿ ದೇಹವನ್ನು ತಂಪಾಗಿಸಲು ಏನು ಕುಡಿಯಬೇಕು?  ಏನು ತಪ್ಪಿಸಬೇಕು?

ಇತ್ತೀಚಿನ ಸುದ್ದಿ