ಬರೋಬ್ಬರಿ 6 ಆಟೋಗಳನ್ನು ಕಳವು ಮಾಡಿದ್ದ 16 ವರ್ಷದ ಬಾಲಕನ ಸೆರೆ - Mahanayaka

ಬರೋಬ್ಬರಿ 6 ಆಟೋಗಳನ್ನು ಕಳವು ಮಾಡಿದ್ದ 16 ವರ್ಷದ ಬಾಲಕನ ಸೆರೆ

auto kalvu
23/03/2022

ಬೆಂಗಳೂರು: ಮನೆ ಮುಂದೆ ನಿಲ್ಲಿಸಿರುವ ಆಟೋಗಳನ್ನು ಕಳವು ಮಾಡುತ್ತಿದ್ದ 16 ವರ್ಷದ ಬಾಲಕನನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.

ಬಂಧಿತ ಆರೋಪಿಯ ವಿರುದ್ಧ ಕೆಂಗೇರಿ, ಕಾಮಾಕ್ಷಿಪಾಳ್ಯ, ಚಂದ್ರಲೇಔಟ್, ಕುಂಬಳಗೋಡು ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಆರೋಪಿಯು ಮನೆ ಮುಂದೆ ನಿಲ್ಲಿಸಿದ ಆಟೋಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ. ಬಳಿಕ ಆಟೋದ ವಯರ್​ ಕಿತ್ತು, ಡೈರೆಕ್ಟ್ ಮಾಡಿ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗುತ್ತಿದ್ದ. ಇಲ್ಲಿವರೆಗೂ 6 ಆಟೋಗಳನ್ನು ಕಳ್ಳತನ ಮಾಡಿದ್ದು, ಈತ 18 ವರ್ಷದೊಳಗೆ ನಟೋರಿಯಸ್ ಕಳ್ಳನಾಗಿ ಕುಖ್ಯಾತಿ ಪಡೆದಿದ್ದಾನೆ.

ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ಬಾಲಕನನ್ನು ವಶಕ್ಕೆ ಪಡೆದ ಬಳಿಕ ಅಸಲಿ ಸತ್ಯ ಬಯಲಿಗೆ ಬಂದಿದೆ. ಬಂಧಿತ ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ 6 ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಾರತದಿಂದ ಕಳ್ಳಸಾಗಣೆಯಾಗಿದ ಪುರಾತನ  ವಸ್ತುಗಳನ್ನು ಹಿಂದಿರುಗಿಸಲು ಆಸ್ಟ್ರೇಲಿಯಾ ಒಪ್ಪಿಗೆ

ಪಾವಗಡ ಅಪಘಾತ ಪ್ರಕರಣ: ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಸಂತ್ರಸ್ತರು!

ಕಸ ಸಾಗಾಟದ ವಾಹನ ಚಾಲಕನ ಮೇಲೆ ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆ

ಮುಗಿಯಿತೇ ಮಾಧ್ಯಮ ಬಹಿಷ್ಕಾರ ಅಭಿಯಾನ?

ಇತ್ತೀಚಿನ ಸುದ್ದಿ