ಸತ್ಯ ಹೇಳಿದ್ದಕ್ಕಾಗಿಯೇ ಬಸವಣ್ಣನವರ ಮೇಲೆ ಅಂದು ಆಕ್ರಮಣವಾಯಿತು: ರಾಹುಲ್ ಗಾಂಧಿ - Mahanayaka

ಸತ್ಯ ಹೇಳಿದ್ದಕ್ಕಾಗಿಯೇ ಬಸವಣ್ಣನವರ ಮೇಲೆ ಅಂದು ಆಕ್ರಮಣವಾಯಿತು: ರಾಹುಲ್ ಗಾಂಧಿ

rahul gandhi
24/04/2023

ಸತ್ಯ ಹೇಳಿದ್ದಕ್ಕಾಗಿಯೇ ಅಂದು ಬಸವಣ್ಣನವರ ಮೇಲೆ ಆಕ್ರಮಣವಾಯಿತು. ಬೆದರಿಸುವ ಕೆಲಸ ಆಯಿತು. ಅದಕ್ಕೆ ಅವರು ಹಿಂಜರಿಯಲಿಲ್ಲ. ಸಮಾಜ‌ ಅವರನ್ನು ಹತ್ತು ಶತಮಾನಗಳ ನಂತರವೂ ಗೌರವಿಸುತ್ತದೆ” ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದರು.

ಬಸವ ಜಯಂತಿ ನಿಮಿತ್ತ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠದಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ವಿಭೂತಿ ಧರಿಸಿ ವೇದಿಕೆ ಮೇಲೆ ಬಂದು ಗಮನ ಸೆಳೆದರು. ಸಂಗಮೇಶ್ವರ ಹಾಗೂ ಬಸವಣ್ಣ ಐಕ್ಯಸ್ಥಳಕ್ಕೆ ಭೇಟಿ ನೀಡುವಾಗಲೇ ವಿಭೂತಿ ಧರಿಸಿದ್ದರು. ಸಂಗಮೇಶ್ವರನಿಗೆ ಆರತಿ ಬೆಳಗಿ ಬಸವಣ್ಣನಿಗೆ ನಮನ ಸಲ್ಲಿಸಿದರು.

ಇತ್ತಿಚೆಗೆ ಬಿಜೆಪಿ ತೊರೆದಿರುವ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಜಗದೀಶ ಶೆಟ್ಟರ್‌ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದೆ ಎಂಬುದನ್ನು ಸಾರಿ ಹೇಳಿತು. ಬಸವ ಜಯಂತಿಗೆ ರಾಹುಲ್‌ ಗಾಂಧಿ ಅವರನ್ನು ಕರೆಯಿಸುವ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಮೂಲಕ ಬಿಜೆಪಿಯ ಬುಟ್ಟಿಯಲ್ಲಿದ್ದ ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್‌ ಯತ್ನಿಸಿತ್ತು. ಈ ಬಾರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರನ್ನು ಕರೆಯುವ ಮೂಲಕ ಮತ್ತೊಮ್ಮೆ ಯತ್ನಿಸಲು ಮುಂದಾಗಿದೆ.

ಈ ಕಾರ್ಯಕ್ರಮವನ್ನು ಬಸವ ಧರ್ಮ ಪೀಠ ಆಯೋಜಿಸಿತ್ತಾದರೂ ಎರಡು ದಿನಗಳಿಂದ ಕಾಂಗ್ರೆಸ್‌ ಮುಖಂಡರೇ ಇಲ್ಲಿ ಓಡಾಡುತ್ತಿದ್ದಾರೆ. ವೇದಿಕೆ ಮೇಲೆಯೂ ಕಾಂಗ್ರೆಸ್‌ ಮುಖಂಡರೇ ಇದ್ದರು. ಬಸವ ಧರ್ಮ ಪೀಠದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಾಗಿದ್ದರು ಎನ್ನುವುದು ವಿಶೇಷವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ