ಸಮುದ್ರದಲ್ಲಿ ತೇಲಿ ಬಂದ ಬಾಟಲ್ ನ್ನು ವಿದೇಶಿ ಮದ್ಯ ಎಂದು ಭಾವಿಸಿ ಕುಡಿದ ಮೂವರು ಸಾವು
ಚೆನ್ನೈ: ಸಮುದ್ರದಲ್ಲಿ ತೇಲಿ ಬಂದ ಬಾಟಿಯಲ್ಲಿದ್ದ ದ್ರವವನ್ನು ಸೇವಿಸಿ ಮೂವರು ಮೀನುಗಾರರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದ್ದು, ಮದ್ಯ ಅಂದುಕೊಂಡು ಇವರು ಬಾಟಲಿಯಲ್ಲಿದ್ದ ದ್ರವವನ್ನು ಕುಡಿದಿದ್ದಾರೆ ಎಂದು ಹೇಳಲಾಗಿದೆ.
ಆಂತೋನಿಸಾಮಿ(38), ಅರೋಕಿಯಾ ಪ್ರೊಹಿತ್(50) ಹಾಗೂ ವಿನೋದ್ ಕುಮಾರ್(26) ಮೃತಪಟ್ಟವರಾಗಿದ್ದು, ಸಮುದ್ರದಲ್ಲಿ ತೇಲಿ ಬಂದ ಬಾಟಲಿಯಲ್ಲಿದ್ದ ಮದ್ಯವನ್ನು ಈ ಮೂವರು ಸೇವಿಸಿದ್ದಾರೆ. ಬಾಟಲಿಯಲ್ಲಿ ಯಾವುದೋ ವಿದೇಶಿ ಮದ್ಯ ಇದೆ ಎಂದು ಅವರು ಅಂದುಕೊಂಡಿದ್ದರು ಎಂದು ಹೇಳಲಾಗಿದೆ.
ಮೀನು ಹಿಡಿಯಲು ಬೋಟ್ ನಲ್ಲಿ ಸಮುದ್ರಕ್ಕೆ ಹೋಗಿದ್ದ ಈ ಮೂವರಿಗೆ ಸಮುದ್ರದಲ್ಲಿ ತೇಲಿಕೊಂಡು ಬಂದ ಬಾಟಲಿಯೊಂದು ಕೈಗೆ ಸಿಕ್ಕಿದೆ. ಇದು ವಿದೇಶಿ ಮದ್ಯ ಎಂದು ಏನೂ ಯೋಚನೆ ಮಾಡದೇ ಕುಡಿಸಿದ್ದಾರೆ.
ಮದ್ಯ ಕುಡಿದ ತಕ್ಷಣವೇ ಮೂವರು ಕೂಡ ಅಸ್ವಸ್ಥರಾಗಿದ್ದು, ಆಂತೋನಿಸಾಮಿ ಸಮುದ್ರದ ತೀರಕ್ಕೆ ಬರುವಷ್ಟರಲ್ಲಿ ಸಾವನ್ನಪ್ಪಿದ್ದರೆ, ಆರೋಕಿಯಾ ಪ್ರೊಹಿತ್ ಹಾಗೂ ವಿನೋದ್ ನಾಗಪಟ್ಟಿಣಂ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.