ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಮಾಡಿ, ಬೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ - Mahanayaka

ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಮಾಡಿ, ಬೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

chikkamagalore
14/09/2021

ಚಿಕ್ಕಮಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಮಾಡಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಿರುವ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಎರಡು ತಿಂಗಳಿನಿಂದ ಕಿಡಿಗೇಡಿಗಳ ಗುಂಪು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ. ನಾವು ಕರೆದಾಗ ನೀನು ಬರಬೇಕು ಇಲ್ಲದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇನ್ನೂ ಆರೋಪಿಯ ಕೃತ್ಯಕ್ಕೆ ಇನ್ನೋರ್ವ ಸಪೋರ್ಟ್ ಮಾಡಿದ್ದು, ವಿಡಿಯೋ ನೋಡಿ ಇನ್ನಿಬ್ಬರು ರಸ್ತೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಲಾಗಿದೆ.

ಇನ್ನೂ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ವಿಡಿಯೋದ ಬಗ್ಗೆ ಯುವಕರು ಚರ್ಚೆ ನಡೆಸಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಾಳೆ ಎಂದು ವರದಿಯಾಗಿದ್ದು, ಈ ದೂರಿನನ್ವಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು 8088059494 ನಂಬರ್ ನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಸೇರಿಸಿಕೊಳ್ಳಿ

ಇನ್ನಷ್ಟು ಸುದ್ದಿಗಳು…

ಸೋದರಳಿಯನ ಪತ್ನಿಗೆ ಹಲ್ಲೆ, ವಿಷ ಕುಡಿಸಲು ಯತ್ನ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ

ಎನ್ ಇಪಿ ವಿರೋಧಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಕ್ಯಾಂಪಸ್ ಫ್ರಂಟ್ ಯತ್ನ | ಪೊಲೀಸರಿಂದ ಲಾಠಿ ಚಾರ್ಜ್

ಶಾಕಿಂಗ್ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ಯುವತಿಯ ಖಾಸಗಿ ಅಂಗ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ!

“ಮಗಳನ್ನು ಹೇಗಾದರೂ ಬದುಕಿಸಿ” ಎಂದು ಅತ್ತು ಗೋಗರೆದರೂ ಬಾಗಿಲು ತೆರೆಯದ ಆಸ್ಪತ್ರೆ | 5 ವರ್ಷದ ಬಾಲಕಿ ಸಾವು

ಕೇವಲ ಐದು ರೂಪಾಯಿಗಾಗಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

ದೇವಸ್ಥಾನ ತೆರವಿನಿಂದ ಕೋಟ್ಯಂತರ ಜನರ ಮನಸ್ಸಿಗೆ ನೋವಾಗಿದೆ: ಸಿ.ಟಿ.ರವಿ

ಮಮತಾ ಬ್ಯಾನರ್ಜಿಯ ಸಾಧನೆಯನ್ನು ತನ್ನ ಸಾಧನೆ ಎಂದು ಜಾಹೀರಾತು ನೀಡಿದ ಯೋಗಿ ಆದಿತ್ಯನಾಥ್

ಇತ್ತೀಚಿನ ಸುದ್ದಿ