ತನ್ನ ಬಯಕೆ ಈಡೇರಲಿಲ್ಲ ಎಂದು ಪತ್ನಿಯ ಮೇಲೆ ಬಿಸಿ ನೀರು ಎರಚಿದ ಪಾಪಿ ಪತಿ!

ಶಹಜಹಾನ್ ಪುರ: ತಾನು ಅಂದುಕೊಂಡದ್ದು ನಡೆಯಲಿಲ್ಲ ಎಂದು ಕೋಪಗೊಂಡ ಪತಿಯೋರ್ವ ತನ್ನ ಪತ್ನಿಯ ಮೇಲೆ ಕುದಿಯುವ ನೀರು ಎರಚಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದ್ದು, ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿರುವ ಪತ್ನಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಪತ್ನಿಯು ಗಂಡು ಮಗುವಿಗೆ ಜನ್ಮ ನೀಡಿಲ್ಲ ಎನ್ನುವ ಕಾರಣಕ್ಕಾಗಿ ಅವಿವೇಕಿ ಪತಿ ಈ ದುಷ್ಕೃತ್ಯ ಎಸಗಿದ್ದಾನೆ. ಮಹಿಳೆಗೆ ಮೂವರು ಮಕ್ಕಳಾಗಿದ್ದು, ಮೂವರು ಮಕ್ಕಳು ಕೂಡ ಹೆಣ್ಣು ಮಕ್ಕಳೇ ಆಗಿದ್ದಾರೆ. ಇದಕ್ಕಾಗಿ ಆರೋಪಿ ಪತಿ ಸತ್ಯಪಾಲ್ ಎಂಬಾತ ತನ್ನ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಲೇ ಇದ್ದ ಎಂದು ಹೇಳಲಾಗಿದೆ.
2013ರಲ್ಲಿ ಈತ ಸಂತ್ರಸ್ತ ಮಹಿಳೆಯನ್ನು ವಿವಾಹವಾಗಿದ್ದ. ವಿವಾಹದ ಬಳಿಕ ದಿನ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆಗಾಗಿಯೂ ಪೀಡಿಸುತ್ತಿದ್ದ ಎಂದು ಶಹಜಹಾನ್ ಪುರ ಗ್ರಾಮಾಂತರ ಎಸ್ ಪಿ ಸಂಜೀವ್ ಬಾಜಪೈ ಹೇಳಿದ್ದಾರೆ.
ಗಂಡು ಮಗು ಜನಿಸಬೇಕೋ ಅಥವಾ ಹೆಣ್ಣು ಮಗು ಜನಿಸಬೇಕೋ ಎನ್ನುವುದು ಪುರುಷನ ದೇಹದಿಂದಲೇ ನಿರ್ಧಾರವಾಗುತ್ತದೆ. ಇದರಲ್ಲಿ ಮಹಿಳೆಯ ಯಾವುದೇ ತಪ್ಪುಗಳಿರುವುದಿಲ್ಲ. ಆದರೆ, ಹೆರುವವಳು ಮಹಿಳೆಯಾಗಿರುವ ಕಾರಣ ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ಮಹಿಳೆ ಶೋಷಣೆಗೊಳಗಾಗುತ್ತಿದ್ದಾಳೆ. ಗಂಡು ಮಗುವಿನಿಂದ ಸ್ವರ್ಗಕ್ಕೆ ದಾರಿ ಸಿಗುತ್ತದೆ ಎನ್ನುವ ಪುರೋಹಿತ ಶಾಹಿಗಳ ಬುರುಡೆ ಕಥೆಗಳಿಂದಾಗಿ ಸಾವಿರಾರು ವರ್ಷಗಳಿಂದ ಹೆಣ್ಣಿನ ಕಣ್ಣೀರು ಭಾರತದ ನೆಲವನ್ನು ಸುಡುತ್ತಲೇ ಇದೆ. ಈ ಆಧುನಿಕ ಕಾಲದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಆದರೂ ಅಲ್ಲಲ್ಲಿ ಇನ್ನೂ ಕೂಡ ಮೂಢರು ಗಂಡು ಮಗುವಿಗಾಗಿ ಹಂಬಲಿಸಿ, ತಮ್ಮ ಪತ್ನಿಯ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಲೇ ಇದ್ದಾರೆ.
ಇನ್ನಷ್ಟು ಸುದ್ದಿಗಳು…
ರೈತ ಹೋರಾಟಗಾರರ ಬಗ್ಗೆ ಹಗುರವಾಗಿ ನಾಲಿಗೆ ಹರಿಬಿಟ್ಟ ಶೋಭಾ ಕರಂದ್ಲಾಜೆ ಜಿಲ್ಲೆಗೆ ಕಳಂಕ: ಕ್ಯಾಂಪಸ್ ಫ್ರಂಟ್
ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು
ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು
ಡೊಳ್ಳು ಹೊಟ್ಟೆಯನ್ನು ವ್ಯಾಯಾಮವೇ ಮಾಡದೇ ಕರಗಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ