ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ಖರೀದಿಸಿದ ಕಾರಿನ ಬೆಲೆ ಎಷ್ಟು ಗೊತ್ತಾ?: ಈ ಕಾರಿನ ವಿಶೇಷತೆ ಏನು?
ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ MG Comet EV ಕಾರನ್ನು ಖರೀದಿ ಮಾಡಿದ್ದಾರೆ. ಅಮ್ಮನ ಜತೆಗೆ ಶೋರೂಮ್ ಗೆ ತೆರಳಿ ಕಾರ್ ನ ಡೆಲಿವರಿ ಪಡೆದಿದ್ದಾರೆ. ಆ ಕಾರ್ ನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ನಮ್ರತಾ ಗೌಡ ಖರೀದಿಸಿದ ಈ MG Comet ಎಲೆಕ್ಟ್ರಿಕ್ ಕಾರು 17.3 kWh ನ ಬ್ಯಾಟರಿ ಹೊಂದಿದೆ. ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ 230 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ.
ಮುಂಭಾಗದ ಸೀಟ್ ಗಳಿಗೆ ಎರಡು ಏರ್ ಬ್ಯಾಗ್ ಅಳವಡಿಸಲಾಗಿದೆ. ನಾಲ್ಕು ಜನ ಈ ಕಾರಿನಲ್ಲಿ ಪ್ರಯಾಣಿಸಬಹುದು. ಆದರೆ ಈ ಕಾರ್ ಗೆ ಕೇವಲ ಎರಡು ಡೋರ್ ಗಳಿವೆ.
ಈ ಕಾರ್ ನಲ್ಲಿ ಒಟ್ಟು ಮೂರು ವೇರಿಯೆಂಟ್ ಗಳಿವೆ. Executive, Excite, ಮತ್ತು Exclusive. ಈ ಕಾರ್ ನ ಬೆಲೆ 6.99 ಲಕ್ಷದಿಂದ ಶುರುವಾಗಿ, 9.24 ಲಕ್ಷದವರೆಗಿದೆ.
ಕಾರ್ ನ ಫೀಚರ್ಸ್ ನೋಡುವುದಾದರೆ, ಪವರ್ ಸ್ಟೀಯರಿಂಗ್, ಪವರ್ ವಿಂಡೋಸ್, ಆಂಟಿ ಲಾಕ್ ಸಿಸ್ಟಮ್, ಏರ್ ಕಂಡಿಷನರ್ ಸಿಸ್ಟಮ್, ಡ್ರೈವರ್ ಏರ್‌ಬ್ಯಾಗ್, ಪ್ಯಾಸೆಂಜರ್ ಏರ್ ಬ್ಯಾಗ್, ವೀಲ್ ಕವರ್ಸ್, ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್ ವ್ಯವಸ್ಥೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth