ಬಿಬಿಎಂಪಿ ಸಂಪೂರ್ಣ ಬಂದ್: ನೌಕರರ ಜೀವ ಉಳಿಸಿ, ಜೀವನ ನಿರ್ವಹಣೆಗೆ ವೇತನ ಹೆಚ್ಚಳ ಮಾಡಿ: ಎ.ಅಮೃತ್ ರಾಜ್

ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ 7ನೇ ವೇತನ ಆಯೋಗ ಜಾರಿಗೆ ಮತ್ತು ಎನ್.ಪಿ.ಎಸ್.ರದ್ದುಪಡಿಸಿ ಓ.ಪಿ.ಎಸ್.ಯೋಜನೆಯ ಜಾರಿಗೆ ತರಲು ಕರ್ನಾಟಕ ರಾಜ್ಯ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಬೆಂಬಲಿಸಿ ಸಾವಿರಾರು ಸಂಖ್ಯೆಯಲ್ಲಿ ಅಧಿಕಾರಿ,ನೌಕರರಿಂದ ಪ್ರತಿಭಟನೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಗೌರವಾಧ್ಯಕ್ಷರಾದ ಹೆಚ್.ವಿ.ಅಶ್ವಥ್ ರವರು ಅಧಿಕಾರಿ ಮತ್ತು ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ, ಬೆಂಗಳೂರುನಗರ ಪ್ರದೇಶದಲ್ಲಿ ವಾಸ ಮಾಡುವವರ ಪ್ರತಿ ತಿಂಗಳು ಖರ್ಚು ವೆಚ್ಚ ಹೆಚ್ಚು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆ . ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ವೇತನ ಮಾತ್ರ ಕಡಿಮೆ. ಕೊರೋನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದರು. 30ಕ್ಕೂ ಹೆಚ್ಚು ನೌಕರರು ಕೊರೋನ ಕಾರಣದಿಂದ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಮೃತಪಟ್ಟರು. ಚುನಾವಣೆ ಕಾರ್ಯ ಮತ್ತು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ನಾನ ಸಮಸ್ಯೆಗಳು ಇದ್ದರು .ಕುಟುಂಬದ ಕಡೆ ಗಮನಹರಿಸದೇ ಬೆಂಗಳೂರು ನಗರ ಅಭಿವೃದ್ದಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದರು.
ತನ್ನ ಅರ್ಧ ಜೀವನ ಸೇವೆ ಸಲ್ಲಿಸುವ ಅಧಿಕಾರಿ, ನೌಕರರು ನಿವೃತ್ತಿ ನಂತರ ವಯೋಸಹಜ ಖಾಯಿಲೆ ಮತ್ತು ಜೀವನ ನಿರ್ವಹಣೆ ಮಾಡಲು ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿ ಇರುತ್ತಾರೆ. ಸಂದ್ಯಾಕಾಲದಲ್ಲಿ ಹಿರಿಯ ಜೀವಗಳಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿದರೆ ವಿಶ್ರಾಂತ ಜೀವನ ಸುಖವಾಗಿ ಕಳೆಯುತ್ತಾರೆ. ನಾವು ಎರಡು ಪ್ರಮುಖ ಬೇಡಿಕೆಗೆಳಾದ ವೇತನ ಹೆಚ್ಚಳ ಮತ್ತು ಓಪಿಎಸ್ ಯೋಜನೆ ಜಾರಿ ಮಾಡಬೇಕು. ನೌಕರರ ಜೀವ ಉಳಿಸಿ, ಜೀವನ ನಿರ್ವಹಣೆಗೆ ವೇತನ ಹೆಚ್ಚಳ ಮಾಡಿ ಎಂದು ಅವರು ಹೇಳಿದರು.
7 ವೇತನ ಆಯೋಗ ಜಾರಿಯಾಗಬೇಕು ಮತ್ತು ಓಪಿಎಸ್ ಯೋಜನೆ ಕುರಿತು ಸರ್ಕಾರ ಆದೇಶ ನೀಡುವರಗೆ ಗೈರು ಹಾಜರಿ ಆಗುವ ಮೂಲಕ ಹೋರಾಟ ನಡೆಸಲಾಗುವುದು. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್ ಬೊಮ್ಮಾಯಿರವರು ನೌಕರರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ, ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಕೆ.ಜಿ.ರವಿ, ರಾಮಚಂದ್ರ, ಸಾಯಿಶಂಕರ್, ರುದ್ರೇಶ್, ಸಂತೋಷ್ ಕುಮಾರ್ ನಾಯ್ಕ್, ಜಿ.ಮಂಜುನಾಥ್, ನಂಜಪ್ಪ, ಕೆ.ಮಂಜೇಗೌಡ, ಬಾಬಣ್ಣ, ಮಂಜು, ಸೂರ್ಯಕುಮಾರಿ, ರೇಣುಕಾಂಬ,ಸಂದ್ಯಾ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw