ಡಾನ್ಸ್ ಬಾರ್ ನ ರಹಸ್ಯ ಕೋಣೆಯಲ್ಲಿ ಬಚ್ಚಿಡಲಾಗಿದ್ದ 17 ಯುವತಿಯರ ರಕ್ಷಣೆ! - Mahanayaka
5:05 AM Wednesday 11 - December 2024

ಡಾನ್ಸ್ ಬಾರ್ ನ ರಹಸ್ಯ ಕೋಣೆಯಲ್ಲಿ ಬಚ್ಚಿಡಲಾಗಿದ್ದ 17 ಯುವತಿಯರ ರಕ್ಷಣೆ!

andheri bar
14/12/2021

ಮುಂಬೈ: ಡಾನ್ಸ್ ಬಾರ್ ಮೇಲೆ ದಾಳಿ ನಡೆಸಿದ ವೇಳೆ ರಹಸ್ಯ ಕೋಣೆಯಲ್ಲಿ ಬಚ್ಚಿಡಲಾಗಿದ್ದ 17 ಯುವತಿಯರನ್ನು  ಪೊಲೀಸರು ರಕ್ಷಿಸಿದ್ದು, ಬಾರ್ ನೊಳಗೆ ಯುವತಿಯರನ್ನು ಅಡಗಿಸಿಡಲೆಂದೇ ಸುರಂಗ ಮಾರ್ಗವನ್ನು ಕೊರೆಯಲಾಗಿತ್ತು.

ಅಂಧೇರಿಯ ದೀಪಾ ಬಾರ್ ನೊಳಗೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆ ಪೊಲೀಸರು ಇಡೀ ಬಾರ್ ನ್ನು ಜಾಲಾಡಿದರೂ ಹುಡುಗಿಯರು ಸಿಕ್ಕಿರಲಿಲ್ಲ.

ಬಳಿಕ ಮೇಕಪ್ ಕೊಠಡಿಯಲ್ಲಿದ್ದ ದೊಡ್ಡ ಕನ್ನಡಿ ಪೊಲೀಸರ ಗಮನಕ್ಕೆ ಬಂದಿದ್ದು, ಅನುಮಾನಗೊಂಡು ಗೋಡೆಯಿಂದ ಕನ್ನಡಿ ತೆಗೆದು ಸುತ್ತಿಗೆಯಿಂದ ಒಡೆದಿದ್ದಾರೆ. ಈ ವೇಳೆ ಕನ್ನಡಿ ಹಿಂಭಾಗದಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ. ಅಲ್ಲಿದ್ದ ಕತ್ತಲ ಕೋಣೆಯಲ್ಲಿ 17 ಯುವತಿಯರು ಪತ್ತೆಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಬಾರ್ ನ ಮ್ಯಾನೇಜರ್ , ಕ್ಯಾಷಿಯರ್ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಂಗಳೂರು ನಗರ: ಕೆ.ಜಿ.ಎಫ್. ಬಾಬುಗೆ ಸೋಲು, ಬಿಜೆಪಿ ಅಭ್ಯರ್ಥಿ ಗೋಪಿನಾಥ್ ಗೆಲುವು

ಹಾಸನ: ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಭರ್ಜರಿ ಗೆಲುವು

ಬೀದರ್: ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆ ಗೆಲುವು

ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು | ಎ.ಮಂಜು ಪುತ್ರಗೆ ಸೋಲು

ಉಗುಳಿದ್ದನ್ನು ನೆಕ್ಕುವಂತೆ ದಲಿತ ವ್ಯಕ್ತಿಗಳ ಮೇಲೆ ದೌರ್ಜನ್ಯ: ಓರ್ವ ಅರೆಸ್ಟ್

ಈ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಪಾಸ್: ಮಾಜಿ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ