ನಿಗೂಢ ಸಾವು; ಮೇವು ತರಲು ಹೋದ ಮೂವರು ದಲಿತ ಸಹೋದರಿಯರ ಪೈಕಿ ಇಬ್ಬರು ಸಾವು, ಓರ್ವಳ ಸ್ಥಿತಿ ಗಂಭೀರ

18/02/2021

ಕಾನಪುರ: ಜಾನುವಾರುಗಳಿಗೆ ಮೇವು ತರಲು ಹೋದ ಮೂವರು ದಲಿತ ಬಾಲಕಿಯರ ಪೈಕಿ ಇಬ್ಬರು ಅವರದ್ದೇ ಹೊಲದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇನ್ನೋರ್ವಳು ಬಾಲಕಿಯ ಸ್ಥಿತಿ ಗಂಭೀರವಾಗಿದೆ.

ಉನ್ನಾವ್ ಜಿಲ್ಲೆಯ ಬಬರುಹಾ ಗ್ರಾಮದ ದಲಿತ ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯರು, ಆಳುಗಳಿಗೆ ಮೇವು ತರಲು ಹೋಗಿದ್ದು,  ಕತ್ತಲಾದರೂ ಮನೆಗೆ ಹಿಂದುರುಗಿರಲಿಲ್ಲ. ಈ ವೇಳೆ ಪಾಲಕರು ಎಲ್ಲಾ ಕಡೆ ಹುಡುಗಿಯರನ್ನು ಹುಡುಕಾಡಿದಾಗ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಬಾಲಕಿಯರು ಪತ್ತೆಯಾಗಿದ್ದಾರೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಬಾಲಕಿಯರ ಕೈಗಳನ್ನು ದುಪ್ಪಟ್ಟಾದಿಂದ ಕಟ್ಟಿಹಾಕಲಾಗಿತ್ತು.

ಬಾಲಕಿಯರ ಮೈಮೇಲೆ ಯಾವುದೇ ಗಾಯಗಳಿಲ್ಲ, ಆದರೆ ಅವರ ಬಾಯಿಯಲ್ಲಿ ನೊರೆ ಬರುತ್ತಿತ್ತು. ಬಾಲಕಿಯರನ್ನು ವಿಷ ಕುಡಿಸಿ ಹತ್ಯೆಗೆ ಯತ್ನಿಸಲಾಗಿದೆ ಎಂದು ಎಸ್ಪಿ ಆನಂದ್ ಕುಲಕರ್ಣಿ ಅನುಮಾನ ವ್ಯಕ್ತಪಡಿಸಿದ್ದಾರೆ.

13, 16 ಹಾಗೂ 17 ವರ್ಷದ ದಲಿತ ಬಾಲಕಿಯರು ಈ ದುಸ್ಥಿತಿಗೆ ಸಿಲುಕಿದವರಾಗಿದ್ದಾರೆ. 13 ಮತ್ತು 16 ವರ್ಷದ ಬಾಲಕಿಯರು ಸಾವನ್ನಪ್ಪಿದ್ದರೆ, 17 ವರ್ಷದ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಓರ್ವಳು ಬಾಲಕಿಯ ರಕ್ಷಣೆಯಾದರೆ, ಅಲ್ಲಿ ಏನು ನಡೆಯಿತು ಎನ್ನುವುದು ತಿಳಿದು ಬರಬಹುದಾಗಿದೆ. ಸದ್ಯ 6 ಪೊಲೀಸ್ ತಂಡಗಳನ್ನು ರಚಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version