6 ಸೀಟ್ ಸಾಮರ್ಥ್ಯದ  ಆಟೋದಲ್ಲಿ 27 ಜನರ ಪ್ರಯಾಣ: ಬೆಚ್ಚಿ ಬಿದ್ದ ಟ್ರಾಫಿಕ್ ಪೊಲೀಸರು - Mahanayaka
5:37 PM Wednesday 5 - February 2025

6 ಸೀಟ್ ಸಾಮರ್ಥ್ಯದ  ಆಟೋದಲ್ಲಿ 27 ಜನರ ಪ್ರಯಾಣ: ಬೆಚ್ಚಿ ಬಿದ್ದ ಟ್ರಾಫಿಕ್ ಪೊಲೀಸರು

auto
11/07/2022

ಲಕ್ನೋ: ಸಾಮಾನ್ಯ ಆಟೋದಲ್ಲಿ ಪ್ರಯಾಣಿಸೋ ವೇಳೆ ನಾವು ಮೂವರು ಅಥವಾ ನಾಲ್ಕು ಪ್ರಯಾಣಿಕರನ್ನು ಕಾಣುತ್ತೇವೆ. ಆದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ಸಂಚಾರ ಮಾಡ್ತಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಯುಪಿಯ ಫತೇಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಕ್ರೀದ್ ಹಿನ್ನೆಯಲ್ಲಿ ನಮಾಜ್​ ಮಾಡಲು ಕೆಲವರು ಆಟೋದಲ್ಲಿ ಬಿಂಡ್ಕಿಗೆ ಬಂದಿದ್ದರು.  ಆಟೋ ಚಾಲಕ ಹೈ ಸ್ಪೀಡ್​​ ನಲ್ಲಿ ತೆರಳುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆಟೋವನ್ನು ತಡೆದು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ

6 ಸೀಟ್​ ಸಾಮಾರ್ಥ್ಯದ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ಆಟೋ ಚಾಲಕ ಬಂದಿದ್ದಾನೆ. ಆಟೋದಲ್ಲಿ ಎಲ್ಲಾ ಪ್ರಯಾಣಿಕರು ಮಹಾರಾಷ್ಟ್ರದವರು ಎಂಬ ಮಾಹಿತಿ ಲಭ್ಯವಾಗಿದೆ.

ಆಟೋ ತಡೆದು ನಿಲ್ಲಿಸಿದ ಬಳಿಕ ಪೊಲೀಸರು ಪ್ರಯಾಣಿಕರನ್ನು ಕೆಳಗಿಳಿಯುವಂತೆ ಹೇಳಿದ್ದರು. ಈ ವೇಳೆ ಎಣಿಸುತ್ತಾ ಹೋದ ಪೊಲೀಸರಿಗೆ ಶಾಕ್​ ಕಾದಿತ್ತು. ಏಕೆಂದರೆ ಆಟೋದಿಂದ ಮಕ್ಕಳು ಸೇರಿ ಬರೋಬ್ಬರಿ 27 ಮಂದಿ ಕೆಳಗಿಳಿದಿದ್ದರು. ಆಟೋ ಚಾಲಕನ ವಿರುದ್ಧ ತಕ್ಷಣ ಕ್ರಮಕೈಗೊಂಡು ಪೊಲೀಸರು ಆಟೋವನ್ನು ಸೀಜ್​ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ