ಬೆಡ್ ​ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್​ ದಂಪತಿ ಜಗಳ - Mahanayaka
1:45 PM Friday 20 - September 2024

ಬೆಡ್ ​ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್​ ದಂಪತಿ ಜಗಳ

torcher
02/02/2022

ಲಕ್ನೋ: ಐಎಎಸ್​ ದಂಪತಿ ಜಗಳ ಬೆಡ್​ ರೂಂನಿಂದ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆಯೊಂದು ನಡೆದಿದೆ. ಮಹಿಳಾ ಐಎಎಸ್​ ಅಧಿಕಾರಿ 32 ವರ್ಷಗಳ ಕಾಲ ತಾನೂ ಅನುಭವಿಸಿರುವ ಕಷ್ಟಗಳ ಬಗ್ಗೆ ದೂರಿನ ಮೂಲಕ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಹುದ್ದೆಯಲ್ಲಿರುವ ಹಿರಿಯ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮೇ 5, 1990 ರಂದು ವಿವಾಹವಾಗಿದ್ದಾರೆ. ಅದೆಷ್ಟೋ ಕನಸುಗಳನ್ನು ಹೊತ್ತು ಗಂಡನ ಮನೆಗೆ ತೆರಳಿದ್ದ ಆ ಮಹಿಳೆಗೆ ಮೊದಲನೇ ರಾತ್ರಿಯಲ್ಲೇ ತನ್ನ ಗಂಡ ದೈಹಿಕ ಅಸಮರ್ಥ ಎಂಬುದು ಅರಿವಾಗಿದೆ. ಅಂದಿನಿಂದ ಆಕೆಯ ಪತಿ ಕಿರುಕುಳ ನೀಡಲಾರಂಭಿಸಿದ್ದಾನೆ. ಇಷ್ಟೇ ಅಲ್ಲದೆ ಆ ಪತಿರಾಯ ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ತನ್ನ ಪತ್ನಿಗೆ ಬೆದರಿಕೆ ಹಾಕುತ್ತಿದ್ದನಂತೆ. ಅಷ್ಟೇ ಅಲ್ಲದೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳಾ ಅಧಿಕಾರಿ ಆರೋಪಿಸಿ ಗೋಮತಿನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಒಂದು ದಿನ ನನ್ನ ಪತಿ ನನ್ನ ಕೈಯನ್ನು ಮುರಿಯಲು ಪ್ರಯತ್ನಿಸಿದನು. ಅಷ್ಟೇ ಅಲ್ಲ ಆರ್ಥಿಕವಾಗಿಯೂ ಶೋಷಣೆಗೆ ಒಳಗಾಗಿದ್ದೇನೆ. ನನ್ನ ಪತಿ ಸಂಬಳ ಪಡೆಯಲು ಸಹ ನನಗೆ ಬಿಡುತ್ತಿರಲಿಲ್ಲ. ಮನೆ ಖರ್ಚಿಗೆ ಕೇವಲ 6 ಸಾವಿರ ರೂ. ನೀಡುತ್ತಿದ್ದರು. ಹೆಚ್ಚು ಹಣ ಕೇಳಿದಲ್ಲಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


Provided by

2015ರಲ್ಲಿ ಸಂಬಳದ ಖಾತೆಯನ್ನು ರಿಗ್ಗಿಂಗ್ ಮಾಡಿ ಪತಿ ಹೆಸರು ಸೇರಿಸಿದ್ದರು. ನಕಲಿ ಸಹಿ ಮಾಡಿ ಹಲವು ವಹಿವಾಟುಗಳನ್ನೂ ನಡೆಸಿದ್ದಾರೆ. ಇದರೊಂದಿಗೆ ನಕಲಿ ಇಮೇಲ್ ಐಡಿ ಸೃಷ್ಟಿಸಿ ನನ್ನ ಸಹೋದರನಿಂದ ಐದು ಲಕ್ಷ ಪಡೆದಿದ್ದಾರೆ. ನನ್ನ ಪತಿ ಕೊರೊನಾದಿಂದ ಬಳಲುತ್ತಿದ್ದರೂ ಈ ವಿಷಯವನ್ನು ಮರೆಮಾಚಿದ್ದರು. ಇದರಿಂದಾಗಿ ಆಕೆಯ ತಾಯಿಗೂ ಸಹ ಕೊರೊನಾ ದೃಢಪಟ್ಟಿತ್ತು ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

ಮಹಿಳಾ ಐಎಎಸ್ ದೂರಿನ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಬಾಲ ಪ್ರಸಾದ್ ಅವಸ್ತಿ ವಿರುದ್ಧ ಕೌಟುಂಬಿಕ ದೌರ್ಜನ್ಯ, ವಂಚನೆ ಮತ್ತು ಐಟಿ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ

ಬಜೆಟ್​ನಲ್ಲಿ ‘ಬಡವರು’ ಪದ ಉಲ್ಲೇಖ: ದೇಶದಲ್ಲಿ ಬಡವರಿದ್ದಾರೆಂಬುದನ್ನ ನೆನಪಿಸಿದ ಸಚಿವರಿಗೆ ಧನ್ಯ; ಚಿದಂಬರಂ

ಉ.ಪ್ರ. ವಿಧಾನಸಭಾ ಚುನಾವಣೆ: ಬಿಎಸ್‌ ಪಿಯಿಂದ ರವಿಪ್ರಕಾಶ್ ಮೌರ್ಯ ಅಯೋಧ್ಯೆ, ಅಮೇಥಿಯಿಂದ ರಾಗಿಣಿ ತಿವಾರಿ ಸ್ಪರ್ಧೆ

ಮನೆ ಛಾವಣಿ ಕುಸಿದು ಮೂವರು ಮಕ್ಕಳ ಸಾವು

ಅಕ್ಕನಿಗೆ ಬೆಂಕಿ ಹಚ್ಚಿದ ತಂಗಿ: ಉರಿಯುತ್ತಿರುವ ಬೆಂಕಿಯ ಜೊತೆ ತಂಗಿಯನ್ನು ತಬ್ಬಿಕೊಂಡ ಅಕ್ಕ; ಇಬ್ಬರ ಸ್ಥಿತಿ ಗಂಭೀರ

 

ಇತ್ತೀಚಿನ ಸುದ್ದಿ