ಅಟ್ಯಾಕ್: ಕಾಂಗ್ರೆಸ್ ಪ್ರತಿಭಟನೆ ವೇಳೆ ಜೇನುನೊಣಗಳ ದಾಳಿ
ಭುವನೇಶ್ವರದಲ್ಲಿ ಕಾಂಗ್ರೆಸ್ ನ ಯುವ ಮತ್ತು ವಿದ್ಯಾರ್ಥಿ ಘಟಕಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಜೇನುನೊಣಗಳ ಹಿಂಡು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
10 ಲಕ್ಷ ರೂ.ಗಳ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಬಿಷ್ಣುಪಾದ ಸೇಥಿ ಅವರನ್ನು ಬಂಧಿಸುವಂತೆ ಒಡಿಶಾ ಛತ್ರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಹತ್ತಿರದ ಜೇನುಗೂಡಿನಿಂದ ಅನಿರೀಕ್ಷಿತವಾಗಿ ಜೇನುನೊಣ ದಾಳಿ ನಡೆಸಿದೆ. ಇದರಿಂದ ಪ್ರತಿಭಟನಾಕಾರರು, ಪೊಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರನ್ನು ರಕ್ಷಣೆಗಾಗಿ ಪರದಾಡುವಂತೆ ಮಾಡಿತು.
ಪೊಲೀಸ್ ಅಧಿಕಾರಿಗಳು ಸಹ ಆಕ್ರಮಣಕಾರಿ ಕೀಟಗಳಿಂದ ತಪ್ಪಿಸಲು ಓಡಾಡುವ ದೃಶ್ಯ ಕಂಡುಬಂತು. ಇನ್ನು ಕುಟುಕುವ ಜೇನಿನೊಣಗಳ ಹಿಂಡನ್ನು ತಪ್ಪಿಸಿ ಪತ್ರಕರ್ತರು ನೇರ ವರದಿ ಮಾಡುತ್ತಿರುವ ದೃಶ್ಯ ಕೂಡಾ ಕಂಡುಬಂತು.
ಸ್ಪಲ್ಪ ಸಮಯದ ನಂತರ ನೊಣಗಳ ಹಿಂಡು ಹೋದ ನಂತರ ಪ್ರತಿಭಟನಾಕಾರರು ಮತ್ತೆ ಒಗ್ಗೂಡಿದರು ಮತ್ತು ತಮ್ಮ ಪ್ರತಿಭಟನೆಯಲ್ಲಿ ಪುನರಾರಂಭಿಸಿದರು. ಸೇಥಿಯನ್ನು ತಕ್ಷಣ ಬಂಧಿಸಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.
ಕೆಲವು ಪ್ರತಿಭಟನಾಕಾರರು ಸೇಥಿ ಅವರ ನಿವಾಸದ ಸುತ್ತಲಿನ ಭದ್ರತಾ ಅಡೆತಡೆಗಳನ್ನು ಮುರಿಯಲು ಪ್ರಯತ್ನಿಸಿದರು. ಇದು ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj