ಭೂಮಿ ಕಂಪಿಸಿದ ಭಯಾನಕ ಅನುಭವ: ರಾತ್ರಿ ಇಡೀ ನಿದ್ದೆ ಮಾಡದೇ ದಿನ ಕಳೆದ ಜನ - Mahanayaka
10:01 AM Wednesday 10 - September 2025

ಭೂಮಿ ಕಂಪಿಸಿದ ಭಯಾನಕ ಅನುಭವ: ರಾತ್ರಿ ಇಡೀ ನಿದ್ದೆ ಮಾಡದೇ ದಿನ ಕಳೆದ ಜನ

earthquake
11/10/2021

ಬೀದರ್: ಬೀದರ್ ಭೂಮಿ ನಡುಗಿದ ಅನುಭವ(Earthquake) ಉಂಟಾಗಿದ್ದು, ಇದರಿಂದಾಗಿ ಜನರು ಭೀತರಾಗಿ ರಾತ್ರಿಯಿಡೀ ನಿದ್ದೆ ಇಲ್ಲದೇ ಆತಂಕದಲ್ಲಿ ಕಳೆದ ಘಟನೆ  ವರದಿಯಾಗಿದೆ.


Provided by

ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಬೆನ್ನಲ್ಲೇ ಬೀದರ್ ನಲ್ಲಿಯೂ ಇದೀಗ ಭೂಕಂಪನದ ಅನುಭವವಾಗಿದೆ. ಬೀದರನ ಹುಮನಾಬಾದ ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ರಾತ್ರಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿರುವ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಬೀದರ್ ನಲ್ಲಿ ಕೂಡ ಮೂರು ನಾಲ್ಕು ದಿನಗಳಿಂದ ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ, ನಿನ್ನೆ ಭಯಾನಕ ಅನುಭವವಾಗಿದ್ದು, ಹೀಗಾಗಿ ಜನರು ಮನೆಯಿಂದ ಹೊರ ಬಂದು ನಿದ್ದೆಯೂ ಮಾಡದೇ ರಾತ್ರಿ ಇಡೀ ಕಳೆದಿದ್ದಾರೆ.

ರಾತ್ರಿ 10 ರಿಂದ ಆರಂಭಗೊಂಡು, ಮಧ್ಯರಾತ್ರಿ 1 ಕ್ಕೆ ಹಾಗೂ ಮುಂಜಾನೆ 6 ಕ್ಕೆ ಭೂಮಿಯಿಂದ ಭಾರಿ ಶಬ್ಥ ಬಂದಿರುವುದಾಗಿ ಜನರು ಹೇಳುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!

ತಗಡಿನ ಶೆಡ್ ಗೆ ತಗಲಿದ ವಿದ್ಯುತ್: ಸಹೋದರರಿಬ್ಬರ ದಾರುಣ ಸಾವು

ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು

KSRTC ಬಸ್  ಮತ್ತು ಆಟೋ ಡಿಕ್ಕಿ: ಮದುಮಗ ಸೇರಿದಂತೆ ಮೂವರ ದಾರುಣ ಸಾವು

ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ

ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಟ್ಯೂಷನ್ ವೇಳೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಶಿಕ್ಷಕ ಅರೆಸ್ಟ್

ಇತ್ತೀಚಿನ ಸುದ್ದಿ