ಬೀದಿ ಬದಿ ಮಲಗಿದ್ದ ಭಿಕ್ಷುಕಿಯ ಮೇಲೆ ಅತ್ಯಾಚಾರ, ಭೀಕರ ಕೊಲೆ - Mahanayaka
9:27 AM Thursday 12 - December 2024

ಬೀದಿ ಬದಿ ಮಲಗಿದ್ದ ಭಿಕ್ಷುಕಿಯ ಮೇಲೆ ಅತ್ಯಾಚಾರ, ಭೀಕರ ಕೊಲೆ

chikka ballapura
13/11/2021

ಚಿಕ್ಕಬಳ್ಳಾಪುರ: ಬೀದಿ ಬದಿ ಮಲಗಿದ್ದ ಭಿಕ್ಷುಕಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲಾ ಕೇಂದ್ರದ ಸಂತೆ ಮಾರುಕಟ್ಟೆ ಸಮೀಪದ ಮೀನು ಹಾಗೂ ಮಾಂಸ ಮಾರಾಟ ಮಳಿಗೆಯ ಮುಂದೆ ಗುರುವಾರ ರಾತ್ರಿ ನಡೆದಿದೆ.

ಇನ್ನೂ ಭಿಕ್ಷುಕಿಯ ಹತ್ಯೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಗಮನಿಸಿ ಹತ್ಯೆ ಆರೋಪಿಯನ್ನು ಬಂಧಿಸಿದ್ದು, ಇದೇ ಪ್ರದೇಶದಲ್ಲಿ ತಳ್ಳುವ ಗಾಡಿಯಲ್ಲಿ ಸಾಂಬಾರು ಪದಾರ್ಥ ಮಾರಾಟ ಮಾಡುತ್ತಿದ್ದ ಅಬ್ದುಲ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ಸುಮಾರು 40 ವರ್ಷ ವಯಸ್ಸಿನ ಭಿಕ್ಷುಕ ಮಹಿಳೆ ರಾತ್ರಿ ಮಲಗಿದ್ದ ಸಂದರ್ಭದಲ್ಲಿ  ಆರೋಪಿ ಅಬ್ದುಲ್ ಆಕೆಯ ಮೇಲೆ ಎರಗಿದ್ದಾನೆ. ಈ ವೇಳೆ ಆಕೆ ನಿದ್ದೆಯಿಂದ ಎದ್ದು ಕಿರುಚಾಡಿದ್ದು, ಈ ವೇಳೆ ಆಕೆಯ ತಲೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದಿದ್ದು, ಪರಿಣಾಮವಾಗಿ ತೀವ್ರ ರಕ್ತ ಸ್ರಾವಗೊಂಡು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಶುಕ್ರವಾರ ಬೆಳಗ್ಗೆ ಅಂಗಡಿಯವರು ಭಿಕ್ಷುಕಿಯ ಹತ್ಯೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಆರೋಪಿಯು ತನಗೇನೂ ಗೊತ್ತೇ ಇಲ್ಲ ಎಂಬಂತೆ ಅದೇ ಮಾರುಕಟ್ಟೆಯ ಸಂಕೀರ್ಣದ ಮುಂದೆ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದೆ. ಸಿಸಿ ಕ್ಯಾಮರ ದೃಶ್ಯವನ್ನು ನೋಡಿದ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

 

ಇನ್ನಷ್ಟು ಸುದ್ದಿಗಳು

ಆಟೋ ಚಾಲಕನನ್ನು ಶೌಚಾಲಯಕ್ಕೆ ಎಳೆದೊಯ್ದು ವಿವಸ್ತ್ರಗೊಳಿಸಿ ವೈದ್ಯರ ತಂಡದಿಂದ ಹೇಯ ಕೃತ್ಯ!

ಲಖಿಂಪುರ ಖೇರಿ ಹಿಂಸಾಚಾರ ಬಿಜೆಪಿಗೆ ಹಾನಿಯುಂಟು ಮಾಡಬಹುದು | ಸಮೀಕ್ಷೆ

ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದು ಯಾವಾಗ? | ಹುತಾತ್ಮ ವೀರರ ತ್ಯಾಗಕ್ಕೆ ಘೋರ ಅವಮಾನ

ದೇಶ ವಿಭಜನೆಯಾಗಲು ಅಂದಿನ ಕಾಂಗ್ರೆಸ್ ನಾಯಕರೇ ಕಾರಣ | ಅಸಾದುದ್ದಿನ್ ಓವೈಸಿ ಗುಡುಗು

ತಾಯಿ ಮೃತಪಟ್ಟರೂ ಗರ್ಭದಲ್ಲಿದ್ದ ಮಗುವನ್ನು ರಕ್ಷಿಸಿದ ವೈದ್ಯರು! | ಅಪರೂಪದ ಘಟನೆ

“47ರ ಸ್ವಾತಂತ್ರ್ಯ ಭಿಕ್ಷೆ, ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ” | ನಟಿ ಕಂಗನಾ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ

ಇತ್ತೀಚಿನ ಸುದ್ದಿ