ಮೈಸೂರು: ಬೀದಿ ದೀಪಗಳಿಲ್ಲದ ಕತ್ತಲ ಪ್ರದೇಶ ಅತ್ಯಾಚಾರಿಗಳಿಗೆ ಅನುಕೂಲವಾಗುತ್ತಿದೆಯೇ? | ಸಾರ್ವಜನಿಕರು ಹೇಳುತ್ತಿರುವುದೇನು? - Mahanayaka

ಮೈಸೂರು: ಬೀದಿ ದೀಪಗಳಿಲ್ಲದ ಕತ್ತಲ ಪ್ರದೇಶ ಅತ್ಯಾಚಾರಿಗಳಿಗೆ ಅನುಕೂಲವಾಗುತ್ತಿದೆಯೇ? | ಸಾರ್ವಜನಿಕರು ಹೇಳುತ್ತಿರುವುದೇನು?

chamundi betta police
26/08/2021

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ನಿರ್ಜನ ಪ್ರದೇಶದಲ್ಲಿ ತನ್ನ ಸ್ನೇಹಿತನ ಜೊತೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಇದೀಗ ಮಹಿಳೆಯರಲ್ಲಿ ಆತಂಕವನ್ನುಂಟು ಮಾಡಿದೆ. ಈ ಪ್ರದೇಶಗಳಲ್ಲಿ ಪುಂಡರ ಹಾವಳಿಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲೂ ಆತಂಕವನ್ನುಂಟು ಮಾಡಿದೆ.

2019ರಲ್ಲಿ  ಇಲ್ಲಿಗೆ ಸಮೀಪದ ಲಿಂಗಾಂಬುಧಿ ಪಾಳ್ಯದಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿತ್ತು.  ನಿರ್ಜನ ಪ್ರದೇಶದಲ್ಲಿ ಯುವತಿಯೊಂದಿಗೆ ಬರುತ್ತಿದ್ದ ಯುವಕನನ್ನು ತಡೆದು ಮಾರಣಾಂತಿಕ ಹಲ್ಲೆ ನಡೆಸಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.  ಇದೀಗ ಅದೇ ಘಟನೆಯನ್ನು ಹೋಲುತ್ತಿರುವ ಮತ್ತೊಂದು ಘಟನೆ ನಡೆದಿದೆ.

ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಆಸುಪಾಸುಗಳಲ್ಲಿ ಪೊಲೀಸರು ಸರಿಯಾಗಿ ಗಸ್ತು ನಡೆಸುತ್ತಿಲ್ಲ ಎನ್ನುವ ಆರೋಪಗಳು ಕೇಲಿ ಬಂದಿದೆ.  ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ವೈಫಲ್ಯಗಳ ಕಡೆಗೆ ಇಲ್ಲಿನ ನಿವಾಸಿಗಳು ಬೆರಳು ತೋರಿಸುತ್ತಿದ್ದಾರೆ.

ಈ ಪ್ರದೇಶಕ್ಕೆ ಏಕಾಂತಕ್ಕಾಗಿ ಜೋಡಿಗಳು ಆಗಮಿಸುತ್ತಿದ್ದು, ಈ ವೇಳೆ ಪುಂಡರು ಜೋಡಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಬಹುತೇಕರು ಪೊಲೀಸರಿಗೆ ಮಾಹಿತಿ ನೀಡಲು ಕೂಡ ಹಿಂಜರಿಯುತ್ತಾರೆ. ಹಾಗಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ತೀವ್ರವಾದ ಗಾಯಗಳು ಮತ್ತು ಆಸ್ಪತ್ರೆಗೆ ದಾಖಲಾಗುವಂತಹ ಸ್ಥಿತಿಗಳು ನಿರ್ಮಾಣವಾದಾಗ ಮಾತ್ರವೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಇಲ್ಲಿನ ಹೊರವಲಯದ ಪ್ರದೇಶಗಳಲ್ಲಿ ಬೀದಿ ದೀಪಗಳೇ ಇಲ್ಲ. ಸಂಜೆಯಾದರೆ ಸಾಕು ಇಲ್ಲಿ ಕತ್ತಲು ಆವರಿಸುತ್ತದೆ ಎಂದು ಇಲ್ಲಿನ ನಿವಾಸಿಗಳು ಅಭಿಪ್ರಾಯಪಡುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಬ್ರೇಕಿಂಗ್ ನ್ಯೂಸ್:  ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಶಂಕಿತ ಆರೋಪಿಗಳ ಬಂಧನ

ಬಾಲಕಿಗೆ ಮನೆ ಮಾಲಿಕನಿಂದ ಲೈಂಗಿಕ ಕಿರುಕುಳ | ಆರೋಪಿಯ ಬಂಧನ

ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೆ, ಗಂಟಲಲ್ಲಿ ಅನ್ನ ಇಳಿಯುವುದಿಲ್ಲವೇ | ಸಿ.ಟಿ.ರವಿ ಪ್ರಶ್ನೆ

ಟಾಲಿವುಡ್ ನಲ್ಲಿಯೂ ಡ್ರಗ್ಸ್ ವಾಸನೆ: ರಾಣಾ ದಗ್ಗುಬಾಟಿ ಸೇರಿದಂತೆ 12 ನಟ-ನಟಿಯರಿಗೆ ಇಡಿ ಸಮನ್ಸ್

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ರಾಜ್ಯ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಿದ್ದರಾಮಯ್ಯ

ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ನೀಡಲಾಗುವ ಸಹಾಯಧನ ಯೋಜನೆ ಹಿಂಪಡೆಯಬೇಕು, ಎಲ್ಲರಿಗೂ ಯೋಜನೆ ಜಾರಿಗೆ ತನ್ನಿ | ಯತ್ನಾಳ್ ಒತ್ತಾಯ

ದಂತ ವೈದ್ಯನ ಕೈಯಿಂದ ಜಾರಿದ ಸ್ಕ್ರೂ ವೃದ್ಧನ ಶ್ವಾಸಕೋಶ ಸೇರಿತು | ಮುಂದೆ ನಡೆದದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ