ಮಂಗಳೂರಿನಲ್ಲಿ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಆರೋಪಿ ನಾಗರಾಜ್ ಬಂಧನ! - Mahanayaka
9:17 AM Tuesday 24 - December 2024

ಮಂಗಳೂರಿನಲ್ಲಿ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಆರೋಪಿ ನಾಗರಾಜ್ ಬಂಧನ!

16/01/2021

ಮಂಗಳೂರು: ಕಳೆದ ವಾರ ಮಂಗಳೂರಿನ ತೊಕ್ಕೊಟ್ಟುನಲ್ಲಿ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,  ಈ ಮೂಲಕ ಈ ಪ್ರಕರಣಕ್ಕೆ  ಪೊಲೀಸರು ತೆರೆ ಎಳೆದಿದ್ದಾರೆ.

ಪ್ರಕರಣ ಸಂಬಂಧ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್,  ಗೋಮಾಂಸಕ್ಕೆ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ ಕಾರಣ ಆಕ್ರೋಶಗೊಂಡು ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

ನಾಗರಾಜ(37) ಬಂಧಿತ ಆರೋಪಿಯಾಗಿದ್ದಾನೆ.  ತೊಕ್ಕೊಟ್ಟಿನ ಬೀಫ್ ಸ್ಟಾಲ್ ನಲ್ಲಿ ಈತ ಹಲವು ಬಾರಿ ಗೋಮಾಂಸ ಖರೀದಿಸಿ ತನ್ನ ಸ್ನೇಹಿತನ ಮನೆಯಲ್ಲಿ ಅಡುಗೆ ಮಾಡಿ, ತಿನ್ನುತ್ತಿದ್ದನು.  ಆದರೆ ಮಾಂಸದ ಅಂಗಡಿಯ ಮಾಲಕ ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದ್ದಾನೆ. ಆಗ ತನಗೆ ಹೆಚ್ಚುವರಿ ಮಾಂಸ ನೀಡುವಂತೆ ಈತ ಬೇಡಿಕೆಯಿಟ್ಟಿದ್ದಾನೆ. ಆದರೆ ಮಾಲಕ ಹೆಚ್ಚುವರಿ ಮಾಂಸ ನೀ ಇದರಿಂದಾಗಿ ಕೋಪಗೊಂಡ ನಾಗರಾಜ ಈ ಕೃತ್ಯ ಎಸಗಿದ್ದಾನೆ ಎಂದು ಅವರು ತಿಳಿಸಿದರು.

ಜ.9ರ ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ಆರೋಪಿ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದಾನೆ.  ಬಳಿಕ ತನ್ನ ತಾಯಿಗೆ ಬಂದು ಈ ವಿಚಾರ ತಿಳಿಸಿದ್ದಾನೆ. ಆದರೆ ಈತ ಮದ್ಯದ ನಶೆಯಲ್ಲಿ ಹೀಗೆ ಹೇಳುತ್ತಿದ್ದಾನೆ ಎಂದು ತಾಯಿ ಸುಮ್ಮನಿದ್ದರು. ಆದರೆ ಬೆಳಗ್ಗೆ ತಾಯಿಗೆ ಈತ ಹೇಳಿದ ವಿಷಯ ನಿಜ ಎಂದು ತಿಳಿದು ಬಂದಿದೆ.

ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಮಾಂಸದ ಆಸೆಗೆ ಬಿದ್ದು, ಮಾಂಸದ ಅಂಗಡಿಯ ಮಾಲಕನ ಮೇಲೆ ಈತ ಹಗೆ ಸಾಧಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.  ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಇತ್ತೀಚಿನ ಸುದ್ದಿ