ಕ್ಯಾನ್ಸರ್ ನ್ನು ಗೆದ್ದವ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಮೃತಪಟ್ಟ! - Mahanayaka
1:18 PM Wednesday 5 - February 2025

ಕ್ಯಾನ್ಸರ್ ನ್ನು ಗೆದ್ದವ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಮೃತಪಟ್ಟ!

beer barrel
24/09/2021

ಬ್ರೆಜಿಲ್:  ಮನುಷ್ಯನಿಗೆ ಸಾವು ಹೀಗೆಯೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಬ್ಬ ವ್ಯಕ್ತಿ ಕ್ಯಾನ್ಸರ್ ನಿಂದ ಸಾವಿಗೀಡಾಗಬಹುದು ಎನ್ನುವ ಭೀತಿಯಲ್ಲಿದ್ದ ಆದರೆ, ಕ್ಯಾನ್ಸರ್ ನ್ನು ಜಯಿಸಿಯೇ ಬಿಟ್ಟ ಆದರೂ ಆತನ ಸಾವು ಖಚಿತವಾಗಿತ್ತು. ತನ್ನದೇ ಬರ್ತ್ ಡೇ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಆತ ಸಾವನ್ನಪ್ಪಿದ್ದಾನೆ.

ಬ್ರೆಜಿಲ್ ನ 43 ವರ್ಷ ವಯಸ್ಸಿನ ಗಿಲ್ಸನ್ ದೊ ನಾಸಿಮೆಂಟೋ ಎಂಬವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆದರೆ, ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದಿದ್ದ ಅವರು ಕ್ಯಾನ್ಸರ್ ನ್ನು ಮಣಿಸಿಯೇ ಬಿಟ್ಟಿದ್ದರು.  ಇದಾದ ಬಳಿಕ ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಅವರು ತಮ್ಮ ಸ್ನೇಹಿತರನ್ನು, ಬಂಧುಮಿತ್ರರನ್ನು ಪಾರ್ಟಿಗೆ ಆಹ್ವಾನಿಸಿದ್ದರು.

ಪಾರ್ಟಿ ವೇಳೆ ಬಿಯರ್ ಬ್ಯಾರೆಲ್ ನಿಂದ ಸರಿಯಾಗಿ ಸುರಿಯುತ್ತಿರಲಿಲ್ಲ. ಹೀಗಾಗಿ ಬಿಯರ್ ಬ್ಯಾರೆಲ್ ಬಾಡಿಗೆಗೆ ನೀಡಿದ್ದ ಕಂಪೆನಿಗೆ ಕರೆ ಮಾಡಿದ್ದ ಗಿಲ್ಸನ್‌ ದೊ ನಾಸಿಮೆಂಟೊ, ಅವರ ಸೂಚನೆಗಳಂತೆ ಬ್ಯಾರೆಲ್ ತೆರೆಯುತ್ತಿದ್ದರು. ಇನ್ನೂ ಬ್ಯಾರೆಲ್ ತೆರೆಯುವಾಗ ಎಚ್ಚರಿಕೆ ಅತಿಯಾದ ಒತ್ತಡ ಇರುತ್ತದೆ ಎಂದು ಕಂಪೆನಿಯವರು ಕೂಡ ಎಚ್ಚರಿಸಿದ್ದರು. ಆದರೆ ಕುಡಿದು ಚಿತ್ತಾಗಿದ್ದ ಗಿಲ್ಸನ್‌ ದೊ  ಬ್ಯಾರೆಲ್ ತೆರೆಯುವಾಗ ಯಡವಟ್ಟು ಮಾಡಿದ್ದು, ಬ್ಯಾರೆಲ್ ಏಕಾಏಕಿ ಸ್ಫೋಟಗೊಂಡಿದೆ.

ಪರಿಣಾಮವಾಗಿ ಬ್ಯಾರೆಲ್ ಚಿಂದಿಯಾಗಿ ಅದರ ಲೋಹದ ಚೂಪಾದ ತುಣುಕುಗಳು ಗಿನ್ಸನ್ ನ ತಲೆಗೆ ಹೊಕ್ಕಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾನ್ಸರ್ ನಿಂದ ಗೆದ್ದ ಸಂತೋಷದಲ್ಲಿದ್ದ ಗಿನ್ಸನ್ ಕೊನೆಗೂ ಬದುಕಲಿಲ್ಲ. ಒಂದೇ ಒಂದು ಪಾರ್ಟಿ ಅವರ ಜೀವನವನ್ನು ಕೊನೆಯಾಗಿಸಿದೆ. ಗಿಲ್ಸನ್‌ಗೆ ಪತ್ನಿ, ತಾಯಿ ಹಾಗೂ 15 ವರ್ಷದ ಮಗನಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಟಾಂಗಾ ಮೂಲಕ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್!

ಬಿಜೆಪಿ ನಾಯಕರೊಬ್ಬರ ಕಚೇರಿಯಲ್ಲಿ  ಮಹಿಳಾ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ!

ಬಾಲಕಿಯ ಮೇಲೆ 29 ಮಂದಿಯಿಂದ ಅತ್ಯಾಚಾರ: 21 ಆರೋಪಿಗಳ ಅರೆಸ್ಟ್

ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದ ಅರ್ಚಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ!

ಕಬ್ಬಿನ ಗದ್ದೆಯಲ್ಲಿ ಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ!

ಮನಮೋಹನ್ ಸಿಂಗ್ ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿದ್ದರು | ಮೋದಿ ಫೋಟೋಗೆ ಕಾಂಗ್ರೆಸ್ ತಿರುಗೇಟು

ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!

ಇತ್ತೀಚಿನ ಸುದ್ದಿ