ಭೀಕರ ಚಳಿಗೆ ನಾಲ್ವರು ಭಾರತೀಯರ ಸಾವು; ಗುರುತು ಪತ್ತೆ - Mahanayaka

ಭೀಕರ ಚಳಿಗೆ ನಾಲ್ವರು ಭಾರತೀಯರ ಸಾವು; ಗುರುತು ಪತ್ತೆ

kenada
28/01/2022

ಟೊರೆಂಟೊ: ಜ. 19ರಂದು ಕೆನಡಾ-ಅಮೇರಿಕಾ ಗಡಿಯ ಬಳಿ ಮ್ಯಾನಿಟೋಬಾದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಶಿಶು ಸೇರಿದಂತೆ ನಾಲ್ವರ ಮೃತದೇಹಗಳ ಗುರುತು ಪತ್ತೆಯಾಗಿದ್ದು, ಅವರೆಲ್ಲರೂ ಭಾರತೀಯರು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಇಲ್ಲಿನ ಭಾರತದ ಹೈಕಮಿಷನ್‌ ತಿಳಿಸಿದೆ.

ಕೆನಡಾದ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಜಗದೀಶ್‌ ಬಲದೇವ್‌ಭಾಯ್‌ ಪಟೇಲ್‌ (39, ವೈಶಾಲಿಬೆನ್‌ ಜಗದೀಶ್‌ ಕುಮಾರ್‌ ಪಟೇಲ್‌ (37), ವಿಹಂಗಿ ಜಗದೀಶ್‌ ಕುಮಾರ್‌ ಪಟೇಲ್‌ (11), ಧಾರ್ಮಿಕ್‌ ಜಗದೀಶ್‌ ಕುಮಾರ್‌ ಪಟೇಲ್‌ (3) ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ.

ಜ.19, 2022ರಂದು ಕೆನಡಾ-ಅಮೇರಿಕಾ ಗಡಿ ಮ್ಯಾನಿಟೋ ಬಾದ ಬಳಿ ತೀವ್ರ ಚಳಿಯಿಂದ ಹೆಪ್ಪುಗಟ್ಟಿ ಮೃತಪಟ್ಟ ಶಿಶು ಸೇರಿದಂತೆ ನಾಲ್ಕು ಶವಗಳು ಪತ್ತೆಯಾಗಿದ್ದವು. ಇದೀಗ ಕೆನಡಾದ ಅಧಿಕಾರಿಗಳು ನಾಲ್ವರ ಗುರುತನ್ನು ದೃಢಪಡಿಸಿದ್ದಾರೆ. ನಾಲ್ವರೂ ಭಾರತೀಯ ಪ್ರಜೆಗಳಾಗಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೈಕಮಿಷನ್‌ ಹೇಳಿಕೆಯಲ್ಲಿ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ

ಎಸ್ಸಿ-ಎಸ್ಟಿಗೆ ಬಡ್ತಿ ಮೀಸಲಾತಿ: ಮಾನದಂಡ ಹಾಕಲು ಸುಪ್ರೀಂ ಕೋರ್ಟ್‌ ನಿರಾಕರಣೆ

ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ

ಇಂದು ಬಿಹಾರ ಬಂದ್: ನಾಲ್ವರ ಬಂಧನ

 

ಇತ್ತೀಚಿನ ಸುದ್ದಿ