ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲೇ ಸಾವು - Mahanayaka

ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲೇ ಸಾವು

mangalore
25/04/2022

ಮಂಗಳೂರು: ಭಾನುವಾರ ರಾತ್ರಿ ರಾ.ಹೆ‌.66ರ ಜಪ್ಪಿನಮೊಗರು ಸಮೀಪದ ನಡುಮೊಗರು ಎಂಬಲ್ಲಿ ಲಾರಿಯೊಂದು ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ‌ಮೃತಪಟ್ಟ ಘಟನೆ  ನಡೆದಿದೆ.

ಮೃತ ಬೈಕ್ ಸವಾರರನ್ನು  ರೊನಾಲ್ಡ್ (59) ಎಂದು ಗುರುತಿಸಲಾಗಿದೆ. ಕೊಣಾಜೆಯಲ್ಲಿರುವ ತನ್ನ ಮನೆಗೆ ಮರಳುತ್ತಿದ್ದಾಗ ಅತೀ ವೇಗ ಬಂದ ಲಾರಿ ಸ್ಕೂಟರ್‌ ನ ಹಿಂಬದಿಗೆ ಢಿಕ್ಕಿ ಹೊಡೆಯಿತು‌. ಇದರಿಂದ ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿ  ವೇಗವೇ ಅಪಘಾತಕ್ಕೆಕಾರಣ ಎಂದು ಎಂದು ತಿಳಿದುಬಂದಿದೆ.ಲಾರಿಯು ಮೊದಲು ಕಾರಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ಸ್ಕೂಟರ್‌ ಗೆ ಢಿಕ್ಕಿ ಹೊಡೆದಿದೆ.


Provided by

ಇದೇ ಸಮಯದಲ್ಲಿ ದಾರಿಯಲ್ಲಿ ಸಾಗುತ್ತಿದ್ದ ಯು.ಟಿ. ಖಾದರ್ ಅವರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಮಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹತ್ವ ಕಳೆದುಕೊಂಡ ನಿಷೇಧ ಅಭಿಯಾನಗಳು:  ಕೆಲವರ ಪ್ರಚಾರಕ್ಕಾಗಿ ನಡೆಯಿತೇ ನಿಷೇಧ ಅಭಿಯಾನ?

ಅಕ್ರಮ ತೈಲ ಸಂಸ್ಕರಣಾಗಾರ  ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಬಿಎಸ್ ವೈ ಹೇಳಿದ್ದೇನು?

ಶ್ರೀರಾಮಸೇನೆ, ಭಜರಂಗದಳ, ಆರೆಸ್ಸೆಸ್ ,  ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡೆಯಬೇಕು: ಸಿದ್ದರಾಮಯ್ಯ ಕಿಡಿ

ಆದಿವಾಸಿ ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ: ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿದ್ದಾರೆ | ಬಿ.ಟಿ‌.ಲಲಿತಾನಾಯಕ್

 

ಇತ್ತೀಚಿನ ಸುದ್ದಿ