ಭೀಕರ ರಸ್ತೆ ಅಪಘಾತ: ಜಾತ್ರೆಗೆ ತೆರಳುತ್ತಿದ್ದ ಐವರು ಸಾವು; ಓರ್ವ ಗಂಭೀರ - Mahanayaka

ಭೀಕರ ರಸ್ತೆ ಅಪಘಾತ: ಜಾತ್ರೆಗೆ ತೆರಳುತ್ತಿದ್ದ ಐವರು ಸಾವು; ಓರ್ವ ಗಂಭೀರ

accident
19/02/2022

ಹೈದರಾಬಾದ್​​: ಮೇಡಾರಂ ಜಾತ್ರೆಗೆ ತೆರಳುತ್ತಿದ್ದ ಐವರು ಭಕ್ತರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರಂಗಲ್ -ಮೇಡಾರಂ ರಸ್ತೆಯಲ್ಲಿ ಭಕ್ತರು ಪ್ರಯಾಣಿಸುತ್ತಿದ್ದಾಗ ಕಾರು, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಪೈಕಿ, ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಮುಲುಗು ಜಿಲ್ಲೆಯ ಚಂದ್ರುಪಟ್ಲಾ ಗ್ರಾಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್  ಜಾಮ್ ಸಮಸ್ಯೆ ಉಂಟಾಗಿದ್ದು, ಬಳಿಕ ಪೊಲೀಸರು ರಸ್ತೆ ತೆರವುಗೊಳಿಸಿದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹುಟ್ಟುಹಬ್ಬದ ಉಡುಗೊರೆ ಕೊಡುವುದಾಗಿ ನಂಬಿಸಿ ಬಡ ಬಾಲಕಿಯ ಸಾಮೂಹಿಕ ಅತ್ಯಾಚಾರ

ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇನೆ ಎಂಬ ಹೇಳಿಕೆ: ಸಚಿವ ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ

ಮತಗಟ್ಟೆಯಲ್ಲಿ ನೂಕುನುಗ್ಗಲು: ಕ್ಷಮೆ ಕೇಳಿದ ತಮಿಳು ನಟ ವಿಜಯ್

ನೀಲಿ ಸಾಗರವಾದ ಬೆಂಗಳೂರು: ವಿಧಾನಸೌಧ-ಹೈಕೋರ್ಟ್ ಚಲೋ ಬೃಹತ್ ಪ್ರತಿಭಟನೆ

ಸಚಿವ ಈಶ್ವರಪ್ಪ ಭಾವಚಿತ್ರಕ್ಕೆ ಬಿಜೆಪಿ ಮುಖಂಡರಿಂದ ಹಾಲಿನ ಅಭಿಷೇಕ

 

ಇತ್ತೀಚಿನ ಸುದ್ದಿ