ಕ್ರೀಮ್ ಬನ್ ನಲ್ಲಿ ಕ್ರೀಮ್ ಇಲ್ಲ, ಟೀಯಲ್ಲಿ ಬಿಸಿ ಇಲ್ಲ ಎಂದು ಜಗಳ: ಬೇಕರಿ ಮಾಲಿಕನಿಗೆ ದುಷ್ಕರ್ಮಿಗಳಿಂದ ಹಿಗ್ಗಾಮುಗ್ಗಾ ಥಳಿತ - Mahanayaka
10:28 PM Thursday 12 - December 2024

ಕ್ರೀಮ್ ಬನ್ ನಲ್ಲಿ ಕ್ರೀಮ್ ಇಲ್ಲ, ಟೀಯಲ್ಲಿ ಬಿಸಿ ಇಲ್ಲ ಎಂದು ಜಗಳ: ಬೇಕರಿ ಮಾಲಿಕನಿಗೆ ದುಷ್ಕರ್ಮಿಗಳಿಂದ ಹಿಗ್ಗಾಮುಗ್ಗಾ ಥಳಿತ

kerala news
26/05/2022

ಕೊಟ್ಟಾಯಂ: ಕೊಟ್ಟಾಯಂನಲ್ಲಿ ಕ್ರೀಮ್ ಬನ್‌ ನಲ್ಲಿ ಕ್ರೀಂ ಇಲ್ಲ ಎಂದು ಆರೋಪಿಸಿ  ದುಷ್ಕರ್ಮಿಗಳು ಬೇಕರಿ ಮಾಲಿಕ ಹಾಗೂ ಅವರ ಕುಟುಂಬಸ್ಥರಿಗೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಅಂಗಡಿ ಮಾಲಿಕ ಶಿವಕುಮಾರ್, ಅವರ ಪತ್ನಿ ಕವಿತಾ, ಮಕ್ಕಳಾದ ಕಾಶಿನಾಥನ್ ಮತ್ತು ಸಿದ್ಧಿ ವಿನಾಯಕ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.  ಅಂಗಡಿಗೆ ಆಗಮಿಸಿದ  ದುಷ್ಕರ್ಮಿಗಳು ಕ್ರೀಮ್ ಬನ್ ನಲ್ಲಿ ಕ್ರೀಮ್ ಇಲ್ಲ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ.

ವೈಕಂ ತಾಲೂಕು ಆಸ್ಪತ್ರೆ ಬಳಿ ಇರುವ ಟೀ ಅಂಗಡಿಗೆ ಬಂದಿದ್ದ ದುಷ್ಕರ್ಮಿಗಳ ತಂಡದಲ್ಲಿ ಒಟ್ಟು 6 ಮಂದಿ ಇದ್ದರು ಎನ್ನಲಾಗಿದೆ. ಅಂಗಡಿ ಮಾಲಿಕರಿಗೆ ಹಲ್ಲೆ ನಡೆಸಿರುವುದೇ ಅಲ್ಲದೇ ಈ ಅಂಗಡಿಯಲ್ಲಿ ಟೀ ಕುಡಿದ ವೃದ್ಧರೊಬ್ಬರಿಗೂ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ನೀನ್ಯಾಕೆ ಈ ಅಂಗಡಿಯಲ್ಲಿ ಬಿಸಿ ಆರಿರುವ ಟೀಯನ್ನು ಕುಡಿಯುತ್ತೀ ಎಂದು ಜಗಳ ತೆಗೆದು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಹಲ್ಲೆಕೋರರಿಗಾಗಿ ಶೋಧ ಆರಂಭಿಸಿದ್ದಾರೆ. ಹಲ್ಲೆಕೋರರು ಇಲ್ಲಿನ  ಮರವಂತುರುತ್ತು ನಿವಾಸಿಗಳು ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಗ್ರರ ಗುಂಡಿಗೆ ಬಲಿಯಾದ ಟಿಕ್ ಟಾಕ್ ಸ್ಟಾರ್ ಅಮರೀನ್ ಭಟ್!

ವೇಶ್ಯಾವಾಟಿಕೆ ಕಾನೂನುಬದ್ಧ ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ: ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೆಕ್‌ ಡೊನಾಲ್ಡ್ಸ್‌ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆ: ಹೊಟೇಲ್ ಗೆ ಬೀಗ

ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ