ಜಾತ್ರೆಗೆ ಹೊಸ ಬಟ್ಟೆ ಖರೀದಿಸಲು ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಮಹಿಳೆ!
ಬೆಳಗಾವಿ: ಜಾತ್ರೆಗೆ ಹೊಸ ಬಟ್ಟೆ ಖರೀದಿಸಲು ಬಂದಿದ್ದ ಯುವಕನನ್ನು ಮಹಿಳೆಯೊಬ್ಬಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿ ನಾಗರಾಜ್ ರಾಗಿ ಪಾಟೀಲ್(25) ಹತ್ಯೆಗೀಡಾದ ಯುವಕನಾಗಿದ್ದು, ಮಹಾರಾಷ್ಟ್ರದ ಕರಾಡ್ ಗೆ ಕೆಲಸಕ್ಕೆ ಹೋಗಿದ್ದ ಈತ ಏಪ್ರಿಲ್ 30ರಂದು ಸ್ವಗ್ರಾಮಕ್ಕೆ ಆಗಮಿಸಿದ್ದ.
ಊರಿನ ಜಾತ್ರೆ ಇರುವ ಕಾರಣ ಬೆಳಗಾವಿಯ ನಗರಕ್ಕೆ ಸ್ನೇಹಿತನ ಜೊತೆಗೆ ಆಗಮಿಸಿದ್ದ. ಇದೇ ವೇಳೆ ಏಕಾಏಕಿ ಬಂದಿದ್ದ ಮದ್ಯವ್ಯಸನಿ ಎನ್ನಲಾದ ಮಹಿಳೆ, ನಾಗರಾಜ್ ಬಳಿಗೆ ಬಂದು ಮೊಬೈಲ್ ಕೊಡು ಎಂದು ಆವಾಜ್ ಹಾಕಿದ್ದಾಳೆ. ನಾಗರಾಜ್ ಯಾವ ಮೊಬೈಲ್ ಎಂದು ಪ್ರಶ್ನಿಸುತ್ತಿದ್ದಂತೆಯೇ ಚಾಕುವಿನಿಂದ ನಾಗರಾಜ್ ನ ಎದೆಗೆ ಚುಚ್ಚಿದ್ದಾಳೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ನನ್ನು ಸ್ನೇಹಿತರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗರಾಜ್ ಸಾವನ್ನಪ್ಪಿದ್ದಾನೆ.
ಯಾವುದೇ ಕಾರಣವೇ ಇಲ್ಲದೇ ಯುವಕನ್ನು ಹತ್ಯೆ ಮಾಡಿದ ಮಹಿಳೆಯನ್ನು ಜಯಶ್ರೀ ಪವಾರ್ ಎಂದು ಗುರುತಿಸಲಾಗಿದೆ. ಕೃತ್ಯದ ಬಳಿಕ ಪರಾರಿಯಾಗಲು ಯತ್ನಿಸಿದ ಆಕೆಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಕೆ ಮದ್ಯ ವ್ಯವಸನಿಯಾಗಿದ್ದು, ಸಾರ್ವಜನಿಕರಿಗೆ ಈ ಹಿಂದಿನಿಂದಲೂ ತೊಂದರೆ ನೀಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಅಮಾಯಕ ಯುವಕನೋರ್ವನ ಪ್ರಾಣವನ್ನೇ ಇದೀಗ ಬಲಿ ಪಡೆದಿದ್ದಾಳೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw