ಟ್ರಕ್ ಗೆ ಅಪ್ಪಳಿಸಿದ ಆಕ್ಸಿಜನ್ ಸಾಗಾಟದ ಟ್ಯಾಂಕರ್!
07/05/2021
ಬೆಳಗಾವಿ: ಬಳ್ಳಾರಿಯಿಂದ ಇಲ್ಲಿಗೆ ಬರುತ್ತಿದ್ದ ಆಕ್ಸಿಜನ್ ಟ್ಯಾಂಕರ್ ತಾಲ್ಲೂಕಿನ ಮುತ್ನಾಳ ಗ್ರಾಮದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಪಘಾತಕ್ಕೀಡಾಗಿದೆ.
ಬಳ್ಳಾರಿಯ ಜೆಎಸ್ ಡಬ್ಲ್ಯು ಘಟಕದಿಂದ ಬರುತ್ತಿದ್ದ ಟ್ಯಾಂಕರ್ ಮುಂದಿದ್ದ ಟ್ರಕ್ ಗೆ ಗುದ್ದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಆ ಟ್ಯಾಂಕರ್ ಚಲಿಸುವ ಸ್ಥಿತಿಯಲ್ಲಿಲ್ಲ. ಬೇರೊಂದು ಟ್ಯಾಂಕರ್ ಗೆ ವರ್ಗಾಯಿಸಿ ಬೆಳಗಾವಿಗೆ ಸಾಗಿಸಲು ನಿರ್ಧರಿಸಲಾಗಿದೆ. ಬೆಳಗಾವಿಗೆ ತೆರಳುವ ವಾಹನಗಳು ಸರ್ವಿಸ್ ರಸ್ತೆ ಮೂಲಕ ಸಾಗುತ್ತಿವೆ.