ಕಟ್ಟುನಿಟ್ಟಿನ ಕ್ರಮ: ಬೆಳಗ್ಗಿನಿಂದಲೇ ಖರೀದಿಗೆ ಮುಗಿಬಿದ್ದ ಜನ - Mahanayaka
4:04 AM Wednesday 11 - December 2024

ಕಟ್ಟುನಿಟ್ಟಿನ ಕ್ರಮ: ಬೆಳಗ್ಗಿನಿಂದಲೇ ಖರೀದಿಗೆ ಮುಗಿಬಿದ್ದ ಜನ

mangalore
07/05/2021

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಇಂದು ಬೆಳಗ್ಗಿನಿಂದಲೇ  ಜನರು ಅಂಗಡಿಗಳ ಮುಂದೆ ಕ್ಯೂ ನಿಂತಿದ್ದು, ಅಂಗಡಿಯವರು ಹೇಳಿದ ಬೆಲೆಗೆ ಸಾಮಗ್ರಿಗಳನ್ನು ಕೊಂಡು ಮನೆ ಸೇರಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ  6ರಿಂದ 9ಗಂಟೆಯವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಿರುವುದರಿಂದ ಜನರು ಒಂದೇ ಬಾರಿಗೆ ಅಂಗಡಿಗಳ ಮುಂದೆ ರಾಶಿ ಬಿದ್ದಿದ್ದು, ಹಿರಿಯ ನಾಗರಿಕರು ಸಾಮಗ್ರಿ ಖರೀದಿಸಲಾಗದೇ ಪರದಾಡುತ್ತಿರುವ ಸ್ಥಿತಿ ಕಂಡು ಬಂತು.

ತರಕಾರಿ, ಹಣ್ಣು, ದಿನಸಿಗಳನ್ನು ಅಂಗಡಿಯವರು ಹೇಳಿದ ಬೆಲೆಗೆ ಜನರು ಕೊಂಡುಕೊಳ್ಳುವಂತಾಗಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಶನಿವಾರ, ಭಾನುವಾರ ವಾರಾಂತ್ಯದ ಲಾಕ್ ಡೌನ್ ಆಗಿರುವುದರಿಂದ ಜನರಿಗೆ ಅಗತ್ಯ ಸಾಮಗ್ರಿ ಖರೀದಿಸುವುದು ಜನರಿಗೆ ಅನಿವಾರ್ಯವಾಗಿತ್ತು.

ಶುಕ್ರವಾರವೇ ಜಿಲ್ಲಾಡಳಿತ ಖರೀದಿ ಸಮಯವನ್ನು ತೀರಾ ಕಡಿಮೆ ಅವಧಿಗೆ ಇಳಿಸಿದ್ದರಿಂದಾಗಿ ಜನರಿಗೆ ತೀವ್ರ ಕಿರಿಕಿರಿ ಉಂಟಾಗಿದೆ. ಹಳ್ಳಿಗಳಿಂದ ನಗರಕ್ಕೆ ವಸ್ತುಗಳ ಖರೀದಿಗೆ ಬರುವವರ ಪಾಡಂತೂ ಹೇಳತೀರದು.

ಈ ಕೊರೊನಾಕ್ಕಿಂತಲೂ ಸರ್ಕಾರ, ಜಿಲ್ಲಾಡಳಿತ  ಮಾಡುತ್ತಿರುವ ಹೊಸ ಹೊಸ ಕಾನೂನುಗಳು ಜನರನ್ನು ಹಿಂಸಿಸುತ್ತಿದೆ ಎಂದು ಜನರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಇತ್ತೀಚಿನ ಸುದ್ದಿ