ಮನೆ ಮುಂದೆ ಅಕ್ರಮ ಕಟ್ಟಡ , ಬಡ ಕುಟುಂಬಕ್ಕೆ ದಿಗ್ಬಂಧನ | ಗ್ರಾ.ಪಂ. ಸದಸ್ಯನ ದೌರ್ಜನ್ಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದಲ್ಲಿ 94ಸಿ ಯೋಜನೆಯಡಿ ಮಂಜೂರಾದ ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಬಡ ಕುಟುಂಬದ ಮನೆ ಮುಂದೆ ಗ್ರಾ.ಪಂ. ಸದಸ್ಯರೊಬ್ಬರು ಅಕ್ರಮ ಕಟ್ಟಡ ಕಟ್ಟಿ ದಿಗ್ಬಂಧನ ಮಾಡಿರುವ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ನೀಡಲಾಗಿದೆ.
ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ಎಂಬಲ್ಲಿನ ನಿವಾಸಿ ಸುದರ್ಶನ್ ಎಂಬವರ ಮನೆಯ ಮುಂದೆ ಸ್ಥಳೀಯ ಗ್ರಾಮಪಂಚಾಯತ್ ಸದಸ್ಯ ಗುರುಪ್ರಸಾದ್ ಎಂಬವರು ಅಕ್ರಮ ಕಟ್ಟಡವೊಂದನ್ನು ನಿರ್ಮಿಸಿ ದಿಗ್ಬಂಧನ ವಿಧಿಸಿದ್ದು ಗ್ರಾಪಂ ಸದಸ್ಯನ ವರ್ತನೆ ಬಗ್ಗೆ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ಸುದರ್ಶನ್ ಅವರ ತಾಯಿ ಹೇಮಾವತಿ ಎಂಬ ಬಡ ಮಹಿಳೆಗೆ 6 ವರ್ಷಗಳ ಹಿಂದೆ ಕಡಿರುದ್ಯಾವರ ಗ್ರಾಮದ ಸನಂ 70/ಪಿ2ರಲ್ಲಿ 5 ಸೆಂಟ್ಸ್ ಜಾಗ 94 ಸಿ ಯೋಜನೆಯಡಿ ಮಂಜೂರಾಗಿದ್ದು ಇದೇ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ.
ಬಡ ಕುಟುಂಬದ ಮನೆ ಮುಂದೆ ದಾರಿಗೆ ಅಡ್ಡಲಾಗಿ ಗ್ರಾ.ಪಂ. ಸದಸ್ಯನ ಅಕ್ರಮ ಕಟ್ಟಡ
ಆದರೆ ಗ್ರಾ.ಪಂ. ಸದಸ್ಯ ಗುರುಪ್ರಸಾದ್ ಅವರು ಹೇಮಾವತಿ ಅವರ ಮನೆಯ ಮುಂದೆ ದಾರಿಗೆ ಅಡ್ಡಲಾಗಿ ಕಂಬ ಮತ್ತು ಸಿಮೆಂಟ್ ಶೀಟ್ ನ ಅಕ್ರಮ ಕಟ್ಟಡವನ್ನು ಕಟ್ಟಿರುವುದು ಸದಸ್ಯನ ಉದ್ಧಟತನಕ್ಕೆ ಸಾಕ್ಷಿಯಾಗಿದೆ ಎಂಬ ದೂರುಗಳು ಕೇಳಿ ಬಂದಿದೆ.
ಗ್ರಾಪಂ ಸದಸ್ಯನಾಗಿ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಬಡ ಕುಟುಂಬದ ವಾಸದ ಮನೆಯ ಮುಂದಿರುವ ಜಾಗವನ್ನು ಅತಿಕ್ರಮಿಸಿ ದಾರಿಗೆ ಅಡ್ಡವಾಗಿ ಅನಧಿಕೃತ ಕಟ್ಟಡ ನಿರ್ಮಿಸಿ ತೊಂದರೆ ಕೊಡುತ್ತಿದ್ದರೂ ಗ್ರಾ.ಪಂ. ಆಡಳಿತ ಅಕ್ರಮ ಕಟ್ಟಡ ತೆರವುಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ವಿವಾದವನ್ನು ಬೆಳೆಯಲು ಬಿಟ್ಟಿರುವುದು ನಿರ್ಲಕ್ಷ್ಯವಹಿಸಿರುವುದು ಸ್ಥಳೀಯರ ಸಂಶಯಕ್ಕೆ ಕಾರಣವಾಗಿದೆ.
ಇದೀಗ ಈ ಬಗ್ಗೆ ನೊಂದ ಬಡ ಟುಟುಂಬ ಧರ್ಮಸ್ಥಳ ಪೊಲೀಸರು ಮತ್ತು ದಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ನ್ಯಾಯಕ್ಕಾಗಿ ಒತ್ತಾಯಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪದವಿ ಪೂರ್ವ ಕಾಲೇಜುಗಳಿಗೆ ಫೆ.15ರ ವರೆಗೆ ರಜೆ ವಿಸ್ತರಣೆ
ಕೋರ್ಟ್ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್ ಅರೆಸ್ಟ್
ಸಿಡಿದೆದ್ದ ಸಂವಿಧಾನ ಪರ ಸಂಘಟನೆಗಳು: ಫೆ.19ರಂದು “ವಿಧಾನ ಸೌಧ-ಹೈಕೋರ್ಟ್ ಚಲೋ”ಗೆ ಕರೆ
ಶಾಸಕ ಹಾಲಪ್ಪ, ಬೇಳೂರು ಗೋಪಾಲಕೃಷ್ಣರಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ
ಪೊಲೀಸ್ ಇನ್ಸ್ಪೆಕ್ಟರ್ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ