ಬೆಳ್ತಂಗಡಿಯ ಪೊಲೀಸ್ ಉಪವಿಭಾಗವೆಂಬ ಕನಸಿಗೆ ತಣ್ಣೀರು ಎರಚಿದ ರಾಜ್ಯ ಸರ್ಕಾರ!

ಬೆಳ್ತಂಗಡಿ; ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಹೊಸದಾಗಿ ಮಂಜೂರಾಗಿದ್ದ ಪೊಲೀಸ್ ಉಪ ವಿಭಾಗವನ್ನು ಬಾಗಲ ಕೋಟೆ ಜಿಲ್ಲೆಯ ಹುನುಗುಂದಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಬೆಳ್ತಂಗಡಿಯ ಪೊಲೀಸ್ ಉಪವಿಭಾಗವೆಂಬ ಕನಸು ಕನಸಾಗಿಯೇ ಉಳಿಯಲಿದೆ.
ತಿಂಗಳ ಹಿಂದೆ ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಉಪ ವಿಭಾಗವನ್ನು ಪ್ರಕಟಿಸಿ ಪೊಲೀಸ್ ಉಪ ವಿಭಾಗವನ್ನು ರಚಿಸಿ ಆದೇಶ ಹೊರಡಿಸಿದ್ದರು.
ಉಪ ವಿಭಾಗದ ವ್ಯಾಪ್ತಿಯಲ್ಲಿ ಬೆಳ್ತಂಗಡಿ, ಬೆಳ್ತಂಗಡಿ ಸಂಚಾರಿ ಠಾಣೆ, ಧರ್ಮಸ್ಥಳ ಠಾಣೆ, ಪೂಂಜಾಲಕಟ್ಟೆ ಠಾಣೆ,ಹಾಗೂ ವೇಣೂರು ಠಾಣೆಗಳು ಬರುವುದಾಗಿ ಘೋಷಿಸಲಾಗಿತ್ತು.
ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಐದು ಪೊಲೀಸ್ ಠಾಣೆಗಳಿದ್ದು ಅತಿ ಹೆಚ್ಚು ಅಒರಾಧ ಪ್ರಕರಣಗಳು ಇಲ್ಲಿ ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ತಾಲೂಕಿನಲ್ಲಿಯೇ ಇದ್ದು ಅತಿ ಹೆಚ್ಚು ವಿಐಪಿ ಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಈ ಎಲ್ಲ ಹಿನ್ನಲೆಯಲ್ಲಿ ಬೆಳ್ತಂಗಡಿಗೆ ಪೊಲೀಸ್ ಉಪ ವಿಭಾಗ ಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಸರಕಾರವೂ ಇದನ್ನು ಮನಗಂಡು ಪೊಲೀಸ್ ಉಪ ವಿಭಾಗವನ್ನು ಮಂಜೂರು ಗೊಳಿಸಿತ್ತು ಆದರೆ ಇದೀಗ ಬೆಳ್ತಂಗಡಿ ಗೆ ಮಂಜೂರಾಗಿದ್ದ ಉಪ ವಿಭಾಗವನ್ನು ರದ್ದು ಪಡಿಸಿ ಬಾಗಲಕೋಟೆ ಜಿಲ್ಲೆಯ ಹುನುಗುಂದ ಉಪ ವಿಭಾಗವನ್ನು ರಚಿಸಿ ಆದೇಶ ಹೊರಡಿಸಿದೆ.
ಬೆಳ್ತಂಗಡಿಗೆ ಮಂಜೂರಾಗಿದ್ದ ಉಪ ವಿಭಾಗವನ್ನು ಯಾಕೆ ರದ್ದು ಪಡಿಸಲಾಗಿದೆ ಎಂಬ ಈ ಆದೇಶದಲ್ಲಿ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw