ಬೆಳ್ತಂಗಡಿ ತಾಲೂಕು ಬೌದ್ಧ ಮಹಾಸಭಾ: ನೂತನ ಪದಾಧಿಕಾರಿಗಳ ಆಯ್ಕೆ
ಬೆಳ್ತಂಗಡಿ : ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಸೆ :19ರಂದು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾದ ಬೆಳ್ತಂಗಡಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ದ.ಕ.ಜಿಲ್ಲಾ ಬೌದ್ಧ ಮಹಾಸಭಾದ ಅಧ್ಯಕ್ಷ ಪದ್ಮನಾಭ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೌದ್ಧ ಮಹಾಸಭಾ ಬೆಳ್ತಂಗಡಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರು : ರಮೇಶ್ ಆರ್.
ಉಪಾಧ್ಯಕ್ಷರು : ಲಕ್ಷ್ಮಣ್ ಜಿ.ಎಸ್.
ಪ್ರಧಾನ ಕಾರ್ಯದರ್ಶಿ- ಅಚುಶ್ರೀ ಬಾಂಗೇರು,
ಸಂಘಟನಾ ಕಾರ್ಯದರ್ಶಿಗಳು :
ಶರತ್ ಧರ್ಮಸ್ಥಳ,
ಹರೀಶ್ ಪಣಕಜೆ,
ಕು. ಯೋಗಿನಿ ಮಚ್ಚಿನ
ಖಜಾಂಚಿ – ರೇಖಾ ಮಾಲಾಡಿ
ಕಾರ್ಯಕಾರಿ ಸಮಿತಿ ಸದಸ್ಯರು :
ವೆಂಕಣ್ಣ ಕೊಯ್ಯೂರು,
ವೆಂಕಪ್ಪ ಪಿ.ಎಸ್.
ಸುಕೇಶ್ ಕೆ. ಮಾಲಾಡಿ,
ಶಂಕರ್ ಮಾಲಾಡಿ,
ಲೋಕೇಶ್ ನಿರಾಡಿ.
ಈ ಸಂದರ್ಭ ಗತ ಸಮಿತಿಯ ದಾಖಲೆ ಪತ್ರಗಳನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಧಮ್ಮಾಚಾರಿ , ದ.ಕ. ಜಿಲ್ಲಾ ಬೌದ್ಧ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಲಕ್ಷ್ಮಣ್, ಸದಸ್ಯರಾದ ಭಾಸ್ಕರ, ಪದ್ಮನಾಭ, ಗ್ರಾ.ಪಂ. ಸದಸ್ಯ ಎಸ್.ಬೇಬಿ ಸುವರ್ಣ, ರಮೇಶ್ ಮುಂತಾದವರು ಉಪಸ್ಥಿತರಿಧ್ದರು.
ಪ್ರಾರಂಭದಲ್ಲಿ ಸಾಮೂಹಿಕ ಬುದ್ಧ ವಂದನೆ ನಡೆಯಿತು. ಸುಕೇಶ್ ಕೆ. ಮಾಲಾಡಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಾಬಿ ಮಾಲಾಡಿ ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka