ತಿಂಗಳಿಗೆ  ₹1,60,000  ಸಂಬಳ: ಬೆಮೆಲ್ ನಲ್ಲಿದೆ ಉದ್ಯೋಗವಕಾಶ - Mahanayaka
10:45 AM Wednesday 15 - January 2025

ತಿಂಗಳಿಗೆ  ₹1,60,000  ಸಂಬಳ: ಬೆಮೆಲ್ ನಲ್ಲಿದೆ ಉದ್ಯೋಗವಕಾಶ

bemel recruitment
31/07/2024

ಸಾರ್ವಜನಿಕ ವಲಯಗಳಲ್ಲಿ ಪ್ರಮುಖ ಉದ್ಯಮವಾಗಿರುವಂತಹ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಹಲವು ಉದ್ಯೋಗಗಳ ಉದ್ಯೋಗವಕಾಶವಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

BEMEL Recruitment 2024 — ಸಾರ್ವಜನಿಕ ವಲಯದ ಪ್ರಮುಖ ಉದ್ಯಮವಾಗಿರುವಂತಹ ಈ ಸಂಸ್ಥೆಯು ಭಾರತೀಯ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖವಾಗಿ ಈ ಸಂಸ್ಥೆಯು ರಕ್ಷಣೆ, ಏರೋ ಸ್ಪೇಸ್, ಮೆಟ್ರೋ, ಕನ್ಸ್ಟ್ರಕ್ಷನ್ ಹಾಗೂ ಮೈನಿಂಗ ಸಂಬಂಧಿಸಿದಂತಹ ಉಪಕರಣಗಳನ್ನು ಉತ್ಪಾದಿಸುತ್ತದೆ.


ADS

ಇಂತಹ ಪ್ರತಿಷ್ಠಿತ ಒಂದು ಸಂಸ್ಥೆಯಲ್ಲಿ ಪ್ರಸ್ತುತ ಗ್ರೇಡ್ 2, ಗ್ರೇಡ್ 3 ಹಾಗೂ ಗ್ರೇಡ್ 4 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಭಾಗದಲ್ಲಿ ನೀಡಲಾಗಿರುವ ಸಂಪೂರ್ಣ ಅರ್ಹತೆಗಳನ್ನು ತಿಳಿದುಕೊಂಡು ಆಗಸ್ಟ್ 16 ನೇ ತಾರೀಖಿನ ಒಳಗಾಗಿಯೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

BEMEL Recruitment 2024 — ನೇಮಕಾತಿಯ ಹುದ್ದೆಗಳ ವಿವರ

ಈ ಒಂದು ಸಂಸ್ಥೆಯಲ್ಲಿ ಒಟ್ಟು 32 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಹುದ್ದೆಗಳು ಹೀಗಿವೆ

* ಇಂಜಿನಿಯರ್ ಹುದ್ದೆಗಳು (Engineer) – 13

* ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು (Assistant Manager) – 17

* ಮ್ಯಾನೇಜರ್ ಹುದ್ದೆಗಳು (Manager) – 2

ಅರ್ಹತೆಗಳು / Eligibility : ಅರ್ಜಿ ಸಲ್ಲಿಸುವಂತವರು ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಎಂ.  ಟೆಕ್ ಮುಗಿಸಿದ್ದರೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತೀರಿ.

ವಯೋಮಿತಿ — ಅರ್ಜಿ ಸಲ್ಲಿಸುವವರು 27 ವರ್ಷದಿಂದ 24 ವರ್ಷದ ವಯೋಮಿತಿಯಲ್ಲಿರಬೇಕು. ಒಂದು ವೇಳೆ ನೀವು ಮೀಸಲಾತಿ ವ್ಯಾಪ್ತಿಯ ಅಡಿಯಲ್ಲಿ ಬರುವುದಾದರೆ ನಿಮಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಕೂಡ ನೀಡಲಾಗುತ್ತದೆ.

ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುವುದು? Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡುವುದರ ಮುಖಾಂತರ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದೆಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ:

* ಇಂಜಿನಿಯರ್ ಆಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವು 40,000 —  1,40,000 ರೂ. ವರೆಗೆ

* ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಆಯ್ಕೆಯಾಗುವವರೆಗೆ ವೇತನವು 50,000 — ₹1,60,000 ರೂ. ವರೆಗೆ

* ಮ್ಯಾನೇಜರ್ ಆಗಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ವೇತನವು 60,000 — ₹1,80,000 ರೂ. ವರೆಗೆ

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು 16 ಆಗಸ್ಟ್ 2024 ಕೊನೆ ದಿನಾಂಕವಾಗಿರುವುದರಿಂದ ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆ ಹೇಗೆ?

ಈ ಒಂದು ನೇಮಕಾತಿಗೆ ನೀವು ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.

ವಿಳಾಸ :

Senior Manager (HR)

Recruitment Cell BEML Soudh No 23/1, 4th Main,

S R Nagar Bangalore – 560027

ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ ಲಿಂಕ್ – www.bemlindia.in


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ