ಕರಿಬೇವಿನ ಎಲೆಯ ಪ್ರಯೋಜನ ತಿಳಿದರೆ ಎಂದಿಗೂ ತಟ್ಟೆಯಿಂದ ಎತ್ತಿ ಪಕ್ಕಕ್ಕಿಡಲಾರಿರಿ…! - Mahanayaka
6:04 PM Wednesday 30 - October 2024

ಕರಿಬೇವಿನ ಎಲೆಯ ಪ್ರಯೋಜನ ತಿಳಿದರೆ ಎಂದಿಗೂ ತಟ್ಟೆಯಿಂದ ಎತ್ತಿ ಪಕ್ಕಕ್ಕಿಡಲಾರಿರಿ…!

kafileef
18/09/2023

ಕರಿಬೇವಿನ ಎಲೆ ಪದಾರ್ಥಕ್ಕೆ ಹಾಕಿದ್ದರೂ ಸಾಕಷ್ಟು ಜನರು ಅದರ ಪರಿಮಳವನ್ನು ಗ್ರಹಿಸಲು ಮಾತ್ರವೇ ಸೀಮಿತ ಮಾಡುತ್ತಾರೆ. ಕರಿಬೇವು ಸಿಕ್ಕಿದ ತಕ್ಷಣವೇ ಅದನ್ನು ಎತ್ತಿ ಪಕ್ಕಕ್ಕಿಟ್ಟು ಊಟ ಮಾಡುವುದು ಹೆಚ್ಚಿನವರ ಅಭ್ಯಾಸ ಎಂಬಂತಾಗಿದೆ. ಆದರೆ, ಕರಿಬೇವಿನ ಸೇವನೆಯಿಂದಾಗುವ ಆರೋಗ್ಯದ ಲಾಭವನ್ನು ತಿಳಿದರೆ ಎಂದಿಗೂ ಕರಿಬೇವನ್ನು ಪಕ್ಕಕ್ಕಿಡಲಾರಿರಿ. ಅದರಲ್ಲೂ ಮದ್ಯಪಾನಿಗಳಿಗಂತೂ ಕರಿಬೇವು ಅತ್ಯಂತ ಪ್ರಯೋಜನಕಾರಿಯಾಗಿದೆ.

ಕರಿಬೇವಿನಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ. ಇದು ಗರ್ಭಿಣಿಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ರಕ್ತದ ಕೊರತೆ ಅನಿಮೀಯಾದಿಂದ ಬಳಲುತ್ತಿರುವವರು ಕರಿಬೇವಿನ ಎಲೆ ತಿಂದಷ್ಟು ಉತ್ತಮವಾಗಿದೆ.

ಇನ್ನೂ ಮದ್ಯಪಾನಿಗಳು ಲಿವರ್, ಕಿಡ್ನಿ ಸಮಸ್ಯೆಗೆ ತುತ್ತಾಗುವುದು ಸಹಜ. ಹೀಗಾಗಿ ಮದ್ಯಪಾನಿಗಳು ಕರಿಬೇವಿನ ಎಲೆಯನ್ನು ಸೇವಿಸುವುದರಿಂದ ಈ ಸಮಸ್ಯೆಗಳಿಗೆ ಸಿಲುಕಿವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಸಂಶೋಧನೆಗಳು ತಿಳಿಸಿವೆ.

ಕರಿಬೇವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಹೆಚ್ಚಾಗದಂತೆ ತಡೆಯಲು ಸಹಕಾರಿಯಾಗಿದೆ. ಹಾಗಾಗಿ ಮಧುಮೇಹಿಗಳಿಗಂತೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಮೂಗು ಕಟ್ಟುವುದು, ಶ್ವಾಸಕೋಶ ಸಮಸ್ಯೆಗಳಿಗೂ ಕರಿಬೇವಿನ ಎಲೆಗಳ ಉಪಯೋಗ ಉತ್ತಮ. ಅಲ್ಲದೆ ಚರ್ಮದ ಸಂರಕ್ಷಣೆ, ಕೂದಲು ಸೊಂಪಾಗಿ ಬೆಳೆಯಲೂ ಕರಿಬೇವಿನ ಎಲೆ ಸೇವಿಸಬಹುದು.

ಇತ್ತೀಚಿನ ಸುದ್ದಿ