ಮಳೆ, ಆಲಿಕಲ್ಲು ಮಳೆಗೆ ತತ್ತರಿಸಿದ ಬೆಂಗಳೂರು: ವಾಹನ ಚಾಲಕರು, ಪಾದಚಾರಿಗಳ ಪರದಾಟ! - Mahanayaka

ಮಳೆ, ಆಲಿಕಲ್ಲು ಮಳೆಗೆ ತತ್ತರಿಸಿದ ಬೆಂಗಳೂರು: ವಾಹನ ಚಾಲಕರು, ಪಾದಚಾರಿಗಳ ಪರದಾಟ!

bangalore rain
21/05/2023

ಬೆಂಗಳೂರು: ನಗರದಲ್ಲಿ ಇಂದು ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿ‌ ವಾಹನ‌ ಚಾಲಕರು‌ ಪಾದಚಾರಿಗಳು ಸಂಕಟ ಪರದಾಟ ಎದುರಿಸಬೇಕಾಯಿತು.

ಮಧ್ಯಾಹ್ನದಿಂದಲೇ‌ ದಟ್ಟ ಮೋಡ ಕವಿದು ಮಳೆಬರುವಂತಾಗಿತ್ತು.ಆಲಿಕಲ್ಲು ಮಳೆ, ಗಾಳಿಗೆ ಸಿಲುಕಿ ಸವಾರರ ತೊಂದರೆ ಅನುಭವಿಸಿದರು. ರಸ್ತೆಗಳ ಮೇಲೆ ಮಂಡಿಯುದ್ದದವರೆಗೆ ನೀರು ನಿಂತು ಹರಿಯಿತು.

ಚಾಲುಕ್ಯ ಸರ್ಕಲ್‌ನಿಂದ ಹೆಬ್ಬಾಳ ಮಾರ್ಗದ ರಸ್ತೆ ಸಂಪೂರ್ಣ ಜಾಮ್ ಆಗಿದೆ. ಬಾಲಬೃಹಿ ಗೆಸ್ಟ್‌ ಹೌಸ್ ಬಳಿ ರಸ್ತೆ ಕೆರೆಯಂತಾಗಿದೆ. ಬಸವನಗುಡಿಯ ಬುಲ್ ಟೆಂಪಲ್ ರೋಡ್‌ ನಲ್ಲಿ ಮಳೆಗೆ ಮರ ಧರೆಗುರುಳಿದೆ. ಬೆಂಗಳೂರು ಹೈಸ್ಕೂಲ್ ಬಸ್ ಸ್ಟಾಂಪ್‌ನಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ವಾಹನ ಸಂಖ್ಯೆ ಕಡಿಮೆ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಕಬ್ಬಿಣದ ಕಾಂಪೌಂಡ್ ನೆಲಕ್ಕುರುಳಿದೆ. ಕಟ್ಟಡ ನಿರ್ಮಾಣ ಜಾಗದಲ್ಲಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿತ್ತು. ಗಾಳಿ ಬೀಸಿದ ವೇಗಕ್ಕೆ ಕಬ್ಬಿಣ ತಗಡಗಳು ಬಿದ್ದಿವೆ. ಅದೇ ಜಾಗದಲ್ಲಿ ಕರೆಂಟ್ ಲೈನ್ ಮೇಲೆ ಬೃಹತ್ ಮರದ ಕೊಂಬೆ ಕೂಡ ಉರುಳಿ ಬಿದ್ದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ