ಮನೆಯ ಛಾವಣಿಗೆ ಬೆಂಕಿ ಹತ್ತಿಕೊಂಡು 3 ವರ್ಷದ ಬಾಲಕಿ ಸಜೀವ ದಹನ
ಮನೆಯ ಛಾವಣಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 3 ವರ್ಷದ ಬಾಲಕಿಯೋರ್ವಳು ಸಜೀವ ದಹನವಾದ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ.
ಬಹದ್ದೂರ್ಪುರ ಗ್ರಾಮದ ರಾಂಬಾಬು ಎಂಬುವವರ ಹುಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಮನೆಯವರು ಬೆಂಕಿ ನಂದಿಸಲು ಮುಂದಾಗಿದ್ದಾರೆ, ಬೆಂಕಿ ನಂದಿಸುವಷ್ಟರಲ್ಲಿ ಬಾಲಕಿ ಹಾಗೂ ಕಟ್ಟಿ ಹಾಕಲಾಗಿದ್ದ ಹಸು ದಾರುಣವಾಗಿ ಸಾವನ್ನಪ್ಪಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸಮರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.
ನೆರೆ ಹೊರೆಯವರು ಬೆಂಕಿ ನಂದಿಸಿ ಬಾಲಕಿಯನ್ನು ರಕ್ಷಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ದೊಡ್ಡ ರಾಜ್ಯ ಎಂದು ಗುರುತಿಸಿಕೊಳ್ಳುವ ಉತ್ತರ ಪ್ರದೇಶ ಇನ್ನೂ ಗುಡಿಸಲು ಮುಕ್ತವಾಗಲು ಸಾಧ್ಯವಾಗಿಲ್ಲ. ಇನ್ನೂ ಕೂಡ ಹುಲ್ಲುಗಳ ಮನೆಗಳಿದ್ದು, ಹುಲ್ಲಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಬೆಂಕಿ ವೇಗವಾಗಿ ಹರಡಿದ್ದು, ಪ್ರಪಂಚ ಅರಿಯುವ ಮುನ್ನವೇ ಮುಗ್ದ ಮಗು ಸಾವನ್ನಪ್ಪಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw