ಶಾಸಕ ರಾಮ್ ದಾಸ್ ಬೆನ್ನಿಗೆ ಗುದ್ದುವಷ್ಟು ಪ್ರೀತಿ ಮೋದಿಜಿಗೆ ಯಾಕೆ?: ರಾಮ್ ದಾಸ್ ಏನು ಹೇಳಿದ್ರು?

ramdas
20/06/2022

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ ಶಾಸಕ ರಾಮ್ ದಾಸ್  ಅವರನ್ನು ಪ್ರಧಾನಿ ನರೇಂದ್ರ ಮೋದಿ ಹತ್ತಿರ ಕರೆದು, ಬೆನ್ನಿಗೆ ಗುದ್ದಿ, ಆತ್ಮೀಯವಾಗಿ ಮಾತನಾಡಿರುವುದು ಬಿಜೆಪಿ ವಲಯದಲ್ಲಿರುವವರಿಗೇ ಆಶ್ಚರ್ಯ ತಂದಿತ್ತು. ಪ್ರಧಾನಿ ಮೋದಿ ಜೊತೆಗೆ ರಾಮ್ ದಾಸ್ ಅವರಿಗೆ ಅಷ್ಟೊಂದು ಆತ್ಮೀಯತೆ ಇದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದರು.

ಆದರೆ, ಇದೀಗ ಈ ವಿಚಾರವಾಗಿ ರಾಮ್ ದಾಸ್ ಅವರೇ ಮಾಧ್ಯವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಮೋದಿಜಿ ತೋರಿಸಿದ ಪ್ರೀತಿಗೆ ಗದ್ಗದಿತರಾದ ಅವರು, ಅದನ್ನೆಲ್ಲ ಹೇಳುವಂತಹದ್ದಲ್ಲ, ಅದು ನನ್ನಮ್ಮವರ ಪ್ರೀತಿ ಎಂದು ಹೇಳಿದರು.

ನನ್ನಮ್ಮನಿಗೂ ಅವರಿಗೂ ಇದ್ದ ಸಂಬಂಧ ಹೇಳೋದಿಕ್ಕೆ ಸಾಧ್ಯವಿಲ್ಲ. ಖಂಡಿತವಾಗಿಯೂ ಅವರನ್ನು ನೆನಪಿಸಿಕೊಂಡರು, ಅಮ್ಮನನ್ನು ತುಂಬಾ ನೆನಪಿಸಿಕೊಂಡರು ಎಂದು ಪ್ರತಿಕ್ರಿಯಿಸಿದರು. ಮೋದಿಜಿ ಜೊತೆಗೆ ಅಂತಹ ಬಂಧ ಏನಿತ್ತು ಎನ್ನುವ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದ ಅವರು ಅದೆಲ್ಲ ಹೇಳುವಂತಹದ್ದಲ್ಲ, ಅದು ನನ್ನ ಅಮ್ಮವರ ಪ್ರೀತಿ ಎಂದರು.

ಮೋದಿಜಿ ಈ ರೀತಿಯ ಪ್ರೀತಿ ತೋರಿಸ್ತಾರೆ ಅಂತ ನೀವು ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ನಾನು ಅಂತಹ ನಿರೀಕ್ಷೆಯಲ್ಲಿರಲಿಲ್ಲ, ಕಳೆದ ಬಾರಿ ಬಂದಾಗಲೂ ಮಾತನಾಡಿಸಿದರು. ವಿಚಾರಿಸಿಕೊಂಡು ಹೋಗಿದ್ದರು ಎಂದರು.

.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಕ್ಸಿಜನ್ ಕೊಡೋಕೆ ಆಗದವರು ಯೋಗ ಮಾಡಲು ಬಂದಿದ್ದಾರೆ: ಸಿದ್ದರಾಮಯ್ಯ ಟೀಕೆ

ಪ್ರಧಾನಿ ಕೈಯಿಂದ ಗುದ್ದಿಸಿಕೊಂಡ ಶಾಸಕ ರಾಮ್ ದಾಸ್!

ತಾಯಿ ಕೋತಿಯನ್ನು ಬೇಟೆಯಾಡಿದ ಚಿರತೆ: ತಾಯಿ ಎದೆ ಅಪ್ಪಿಕೊಂಡೇ ಇದ್ದ ಮರಿ ಕೋತಿ

ಕಾರು-ಕೆಎಸ್ಸಾರ್ಟಿಸಿ ಬಸ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಇಂದು ಮಧ್ಯಾಹ್ನ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನ: ಏನೇನು ಕಾರ್ಯಕ್ರಮವಿದೆ?

ಇತ್ತೀಚಿನ ಸುದ್ದಿ

Exit mobile version