ಬೇರೊಬ್ಬನನ್ನು ನೋಡಿದಳು ಎಂದು ಹುಡುಗಿಯನ್ನು ಕೊಂದ ಪಾಪಿ! - Mahanayaka

ಬೇರೊಬ್ಬನನ್ನು ನೋಡಿದಳು ಎಂದು ಹುಡುಗಿಯನ್ನು ಕೊಂದ ಪಾಪಿ!

death
04/01/2022

ಜೈಪುರ: ಬೇರೊಬ್ಬನನ್ನು ನೋಡಿದಳು ಎಂಬ ಕಾರಣಕ್ಕೆ ಯುವಕನೋರ್ವ ಹುಡುಗಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜೈಪುರದಲ್ಲಿ ನಡೆದಿದ್ದು,  ಕ್ಷುಲ್ಲಕ ಕಾರಣಕ್ಕೆ ಯುವತಿ ಬಲಿಯಾಗಿದ್ದಾಳೆ.

ಹತ್ಯೆಗೀಡಾಗಿರುವ  ಹುಡುಗಿಯ ಮೇಲೆ ಯುವಕನೋರ್ವ ಕಣ್ಣಿಟ್ಟಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಆ ಹುಡುಗಿಯು ಬೇರೊಬ್ಬ ಯುವಕನನ್ನು ನೋಡುತ್ತಿದ್ದಳು ಎಂದು ಕೋಪಗೊಂಡ ಆತ ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಶನಿವಾರ ಪರೀಕ್ಷೆ ಮುಗಿಸಿ ಹುಡುಗಿ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಚಾಕುವಿನಿಂದ ಆಕೆಗೆ ಇರಿದು, ಬಹಳ ಸಮೀಪದಿಂದ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಯುವಕನ ಮಾನಸಿಕ ಸ್ಥಿತಿಗೆ ಇದೀಗ ಹುಡುಗಿಯೊಬ್ಬಳು ಪ್ರಾಣ ಕಳೆದುಕೊಳ್ಳುವಂತಾಗಿದೆ. ಬೇರೊಬ್ಬ ಯುವಕನನ್ನು ನೋಡಿದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಪಾಪಿ, ಅಮಾಯಕ ಹುಡುಗಿಯ ಪ್ರಾಣವನ್ನೇ ತೆಗೆದಿದ್ದಾನೆ ಎನ್ನುವ ಆಕ್ರೋಶ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರೀತಿಸಿ ವಂಚನೆ: ಕನಕಗಿರಿ ಶಾಸಕರ ವಿರುದ್ಧ ಗಂಭೀರ ಆರೋಪ!

“ಲಾಕ್​​ ಡೌನೋ, ಸೆಮಿ ಲಾಕ್​ ಡೌನೋ? ಸಭೆಯ ಬಳಿಕ ತೀರ್ಮಾನ”

ರೈಲಿನಲ್ಲಿ ಪ್ರಯಾಣಿಕನಿಗೆ ಬೂಟುಗಾಲಿನಿಂದ ಒದ್ದ ಕೇರಳ ಪೊಲೀಸ್!

ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಕಾಂಗ್ರೆಸ್ ಮುಖಂಡೆಯ ಮೇಲೆ ಗುಂಡಿನ ದಾಳಿ

ಫೇಸ್ ಬುಕ್ ನಲ್ಲಿ ಪರಿಚಯ: 15 ವರ್ಷದ ಬಾಲಕನನ್ನು ಮದುವೆಯಾದ 22ರ ಯುವತಿ

 

ಇತ್ತೀಚಿನ ಸುದ್ದಿ