ಕೇಸರಿ ತೊಟ್ಟು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದಾಗ ಯಾಕೆ ಆಕ್ರೋಶ ಬರಲ್ಲ?: ಪ್ರಕಾಶ್ ರಾಜ್ ಪ್ರಶ್ನೆ - Mahanayaka
5:57 PM Wednesday 11 - December 2024

ಕೇಸರಿ ತೊಟ್ಟು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದಾಗ ಯಾಕೆ ಆಕ್ರೋಶ ಬರಲ್ಲ?: ಪ್ರಕಾಶ್ ರಾಜ್ ಪ್ರಶ್ನೆ

prakash raj
17/12/2022

ಧಾರ್ಮಿಕ ವ್ಯಕ್ತಿಯೊಬ್ಬರು ಕೇಸರಿ ತೊಟ್ಟು ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡಿದ್ರೆ ಅವರ ವಿರುದ್ಧ ಯಾಕೆ ಆಕ್ರೋಶ, ಅಸಮಾಧಾನ ಕೇಳಿ ಬರುವುದಿಲ್ಲ? ಕೇವಲ ಸಿನಿಮಾದವರ ಮೇಲೆ ಯಾಕೆ? ಎಂದು ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.

ಪಠಾಣ್ ಚಿತ್ರದ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು,  ಬೇಷರಮ್ ಮತಾಂಧರೇ, ಕೇಸರಿ ತೊಟ್ಟ ಗಂಡಸರು ಬಲಾತ್ಕಾರ ಮಾಡಿದ್ರೂ ಪರವಾಗಿಲ್ಲ? ದ್ವೇಷದ ಭಾಷಣ ಮಾಡುವವರುಮ ದಲ್ಲಾಳಿಗಳು, ಎಂಎಲ್ ಎಗಳು, ಕೇಸರಿ ತೊಟ್ಟ ಸ್ವಾಮೀಜಿ ಅಪ್ರಾಪ್ತರ ಮೇಲೆ ಅತ್ಯಾಚಾರ ಮಾಡ್ತಾರೆ, ಆದ್ರೆ ಸಿನಿಮಾದಲ್ಲಿ ಕೇಸರಿ ಉಟ್ಟರೆ ತಪ್ಪು? ಎಂದು ಅವರು ಪ್ರಶ್ನಿಸಿದ್ದಾರೆ.

ಪಠಾಣ್ ಚಿತ್ರದ ಹಾಡಿನ ಬಗ್ಗೆ ಅಪಸ್ವರ ಎತ್ತಿರುವುದರ ವಿರುದ್ಧ ಇದೀಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದು ಹಾಡಿನ ವಿರುದ್ಧದ ಅಸಮಾಧಾನ ಅಲ್ಲ, ಶಾರೂಖ್ ಖಾನ್ ಅನ್ನೋ ಹೆಸರಿನ ಮೇಲಿನ ಅಸೂಯೆ ಎಂದು ವಿಮರ್ಶಿಸಲಾಗುತ್ತಿದೆ. ಸಾಕಷ್ಟು ಸಿನಿಮಾಗಳ ಹಾಡುಗಳಲ್ಲಿ ದೀಪಿಕಾ ಪಡುಕೋಣೆ ಧರಿಸಿರುವಂತಹ ಬಣ್ಣದ ವಸ್ತ್ರಗಳನ್ನು ಬಳಸಲಾಗಿದೆ. ಆದರೆ, ಶಾರೂಖ್ ಖಾನ್ ಮುಸ್ಲಿಮ್ ಅನ್ನೋ ಕಾರಣಕ್ಕಾಗಿ ಈ ವಿವಾದವನ್ನು ಹಬ್ಬಿಸಲಾಗಿದೆ ಅನ್ನೋ ಅಭಿಪ್ರಾಯಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ