ಯುವ ಪತ್ರಕರ್ತ ಸೂರ್ಯಕಾಂತ್ ಎಕಲಾರಗೆ ಉತ್ತಮ ವರದಿಗಾರ ಪ್ರಶಸ್ತಿ
ಔರಾದ್: ಯುವ ಪತ್ರಕರ್ತ ಲೇಖಕ ಸೂರ್ಯಕಾಂತ್ ಎಕಲಾರ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ದೊರಕಿದೆ.
ಸೂರ್ಯಕಾಂತ್ ಎಕಲಾರ್ ಅವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಎಕಲಾರ್ ಗ್ರಾಮದವರು. ಇವರು ಬರಹಗಾರರು ಹಾಗೂ ವಾಗ್ಮಿಯಾಗಿದ್ದು, ಭಾರತ ವೈಭವ್ ದಿನ ಪತ್ರಿಕೆಯ ವರದಿಗಾರರಾಗಿ ಔರಾದ್ ಮತ್ತು ಕಮಲನಗರ ತಾಲೂಕಿನಲ್ಲಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸುದ್ದಿಗಳು ಹಾಗೂ ಕೆಲವೊಂದು ಲೇಖನಗಳು ಹಾಗೂ ಜನರಿಗೆ ಮೆಚ್ಚುಗೆಯಾಗುವ ಸುದ್ದಿಗಳನ್ನು ಮಾಡುವ ಮೂಲಕ ಜನ ಸಾಮಾನ್ಯರ ಬದುಕಿನ ಮೇಲೆ ಒಳ್ಳೆಯ ಪರಿಣಾಮ ಬೀರಿದ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಮಾಡಿದವರು, ಇತ್ತೀಚಿಗೆ ವಿಶ್ವ ಕನ್ನಡ ಸಂಸ್ಥೆಯಿಂದ ನೀಡಿರುವ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪಡೆದುಕೊಂಡವರು. ಭಾರತ ವೈಭವ ದಿನಪತ್ರಿಕೆಯ 25ನೇ ವಾರ್ಷಿಕೋತ್ಸವ ಅಂಗವಾಗಿ ದಿ ಬೆಸ್ಟ್ ಡಿಸ್ಟಿಕ್ ರಿಪೋರ್ಟರ್ ಜಿಲ್ಲೆಯ ಉತ್ತಮ ವರದಿಗಾರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಾಧನೆ ಮೆರೆದಿದ್ದಾರೆ.
ಇವರು ಅನೇಕ ಗ್ರಾಮೀಣ ಭಾಗದ ಮುಖ್ಯ ಸುದ್ದಿ ಮಾಡಿದ್ದಾರೆ. ಭಾರತ ವೈಭವ ದಿನಪತ್ರಿಕೆ ಹಾಗೂ ಬಿವಿ ನ್ಯೂಸ್ ಚಾನೆಲ್ ವತಿಯಿಂದ ಬೀದರ್ ಜಿಲ್ಲೆಯ ಉತ್ತಮ ವರದಿಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಭಾರತ ವೈಭವ ಪತ್ರಿಕೆಯ ಸಂಪಾದಕರು ಎನ್.ಪ್ರಶಾಂತ ರಾವ್ ಐಹೊಳೆ, ಅಬಕಾರಿ ಸಚಿವರಾದ ಬಿ.ಎನ್. ತಿಮ್ಮಾಪುರೆ, ಆಶಾ ಪ್ರಶಾಂತ್ ರಾವ್ ಐಹೊಳೆ ಇದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: