ಸೂಪರ್ ಮಾರ್ಕೆಟ್ ವಿನ್ಯಾಸದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ g racks - Mahanayaka

ಸೂಪರ್ ಮಾರ್ಕೆಟ್ ವಿನ್ಯಾಸದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ g racks

g racks
11/02/2023

ಕಳೆದ 15 ವರ್ಷಗಳಿಂದ ಹೈಪರ್ ಮಾರ್ಕೆಟ್, ಮೆಡಿಕಲ್ ಮತ್ತಿತರ ಕಮರ್ಷಿಯಲ್ ಅಂಗಡಿಗಳಿಗೆ ಬೇಕಾದ ರಾಕ್ ನಿರ್ಮಿಸಿಕೊಂಡು ಬರುತ್ತಿದ್ದ ಮಂಗಳೂರಿನ ಜಿ- ರಾಕ್ಸ್ ಸಂಸ್ಥೆಯು ಇದೀಗ ಮತ್ತಷ್ಟು ಹೊಸತನದೊಂದಿಗೆ ಕಾರ್ಯಾಚರಿಸುತ್ತಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಂಗಳೂರಿನ ಬಂದರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ 2008ರಿಂದ ಅತ್ಯುತ್ತಮ ಸೇವೆ ನೀಡುತ್ತಾ ಬಂದಿದೆ. ಗ್ಲೋಬಲ್ ರಾಕ್ಸ್ ಆಂಡ್ ಇಂಟೀರಿಯರ್ಸ್ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿದ್ದ ಈ ಸಂಸ್ಥೆಯು ಸೂಪರ್ ಮಾರ್ಕೆಟ್‌ಗಳ ಡಿಸ್‌ಪ್ಲೇ ರಾಕ್, ಶಾಪಿಂಗ್ ಟ್ರಾಲಿ, ಕ್ಯಾಶ್ ಡೆಸ್ಕ್ ಕೌಂಟರ್, ಮೊದಲಾದ ಸೇವೆಗಳನ್ನು ನೀಡುತ್ತಾ ಬಂದಿದ್ದು, ಇದೀಗ ಜಿ-ರಾಕ್ಸ್ ಎಂಬ ತನ್ನದೇ ಬ್ರಾಂಡ್‌ ನೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ಸಂಸ್ಥೆಯ ಪಾಲುದಾರರಾದ ನೌಶಾದ್ ಅಲಿ ಹೇಳಿದ್ದಾರೆ.

ಶಾಪಿಂಗ್ ಮಳಿಗೆಗಳಿಗೆ ಬೇಕಾದ ಎಲ್ಲಾ ತರದ ಡಿಸ್‌ಪ್ಲೇ, ವ್ಹೀಲ್ ಬಾಸ್ಕೆಟ್, ಆಫರ್ ಬಿನ್, ರೋಲಿಂಗ್ ಬಾಸ್ಕೆಟ್, ರೈಸ್ ಬಿನ್, ಹೊಟೇಲ್  ಲಗೇಜ್ ಟ್ರಾಲಿ, ಮೊದಲಾದವುಗಳನ್ನು ಕ್ಲಪ್ತ ಸಮಯಕ್ಕೆ ಸೂಕ್ತ ವಿನ್ಯಾಸದಲ್ಲಿ ನಿರ್ಮಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕದಲ್ಲಿ ಸುಮಾರು 270ಕ್ಕೂ ಅಧಿಕ ಸೂಪರ್ ಮಾರ್ಕೆಟ್‌ಗಳನ್ನು ವಿನ್ಯಾಸಗೊಳಿಸಿರುವ ಈ ಸಂಸ್ಥೆ, ಗ್ರಾಹಕರ ವಿಶ್ವಾಸಕ್ಕೂ ಪಾತ್ರವಾಗಿದೆ ಎಂದು ಮತ್ತೋರ್ವ ಪಾಲುದಾರ ಮುಶ್ತಾಕ್ ವಿವರಿಸಿದ್ದಾರೆ.

ನುರಿತ ಕೆಲಸಗಾರರ ಉತ್ತಮ ತಂಡವನ್ನು ಹೊಂದಿರುವ ಈ ಸಂಸ್ಥೆಯು ಹಲವು ಪ್ರತಿಷ್ಟಿತ ಸಂಸ್ಥೆಗಳ ಡಿಸ್‌ಪ್ಲೇ ವಿನ್ಯಾಸಗೊಳಿಸಿ ಹೆಸರುವಾಸಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ