ಬಿಸಿಲಿನ ಬೇಗೆಯಲ್ಲಿ ಬಾಯಾರಿಗೆ ನೀಗಿಸಲು ಈ ಜ್ಯೂಸ್ ಉತ್ತಮ
ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ತಾಪಕ್ಕೆ ಜನರು ಸುಸ್ತಾಗಿ ಬಿಡುತ್ತಾರೆ. ತೀರದ ದಾಹದ ನಡುವೆಯೇ ನಮ್ಮ ದೇಹದ ನೀರಿನಾಂಶ ಕಡಿಮೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಈ ಬಾರಿಯಂತೂ “ಬಿಸಿಲಿನ ತಾಪ ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಸಾಕಷ್ಟು ಸಂಖ್ಯೆಯ ಜನರು ಹೇಳುತ್ತಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಪರಿಸ್ಥಿತಿಯಂತೂ ವರ್ಣನೆ ಮಾಡಲು ಕೂಡ ಸಾಧ್ಯವಿಲ್ಲದಂತಾಗಿದೆ.
ಬಿಸಿಲಿನ ಬೇಗೆ ಹಾಗೂ ತೀರದ ಬಾಯಾರಿಕೆಗೆ ಸಾಕಷ್ಟು ಸಂಖ್ಯೆಯ ಜನರು ರೆಡಿಮೆಡ್ ಪಾನೀಯಗಳಾದ ಪೆಪ್ಸಿ ಕೋಲಾ, ಸ್ಪ್ರೈಟ್ ಎಂದೆಲ್ಲ, ಕುಡಿಯುತ್ತಾರೆ. ಆದರೆ ಇವು ಕ್ಷಣದಲ್ಲಿ ನಮಗೆ ಸಂತೋಷ ನೀಡಬಹುದು ಆದರೆ, ಅದು ಆರೋಗ್ಯಕ್ಕೆ ಉತ್ತಮವಲ್ಲ.
ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಲು ಹಾಗೂ ನಮ್ಮ ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ಲಿಂಬೆ ಹಣ್ಣನ್ನು ಬಳಸಬಹುದಾಗಿದೆ. ಲಿಂಬೆ ಹಣ್ಣಿನ ರಸಕ್ಕೆ ಬೆಲ್ಲ, ಚಿಟಿಕೆ ಏಲಕ್ಕಿ, ಸ್ವಲ್ಪ ಪ್ರಮಾಣದ ಕಾಳುಮೆಣಸಿನ ಪುಡಿ ಬೆರೆಸಿ ಕುಡಿದರೆ, ಬಾಯಾರಿಕೆ ಹಾಗೂ ದೇಹದ ಆಯಾಸ ಪರಿಹಾರವಾಗುತ್ತದೆ.
ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಬೇಸಿಗೆಯ ಸಮಸ್ಯೆಗಳು ಕಾಡುವುದಿಲ್ಲ. ಎರಡು ದಿನಕ್ಕೊಮ್ಮೆ ಎಳನೀರು ಕುಡಿಯುವುದರಿಂದ ದೇಹದ ಉಷ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ನಿಂಬೆರಸ, ಸೌತೆಕಾಯಿ, ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದು ಉತ್ತಮ. ಮಜ್ಜಿಗೆ ಕೂಡಾ ಬೇಸಿಗೆಗೆ ಉತ್ತಮವಾದ ಪಾನೀಯವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka