ಬೇಟೆ ಹುಡುಕುತ್ತಾ ಬಂದು ನಾಯಿಯ ಗೂಡಿನೊಳಗೆ ಬಂಧಿಯಾದ ಚಿರತೆ! - Mahanayaka

ಬೇಟೆ ಹುಡುಕುತ್ತಾ ಬಂದು ನಾಯಿಯ ಗೂಡಿನೊಳಗೆ ಬಂಧಿಯಾದ ಚಿರತೆ!

chitha
16/09/2021

ಕುಮಟಾ: ನಾಯಿಯನ್ನು ಬೇಟೆಯಾಡಲು ಊರಿಗೆ ಬಂದ ಚಿರತೆಯೊಂದು, ಮನೆಯ ಅಂಗಳದಲ್ಲಿರುವ ನಾಯಿ ಪಂಜರದಲ್ಲಿ ಆಕಸ್ಮಿಕವಾಗಿ ಸೆರೆಯಾಗಿರುವ ಘಟನೆ ತಾಲ್ಲೂಕಿನ ಕಿಮಾನಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಇಲ್ಲಿನ ನಿವಾಸಿ ವಿಷ್ಣು ನಾಗಪ್ಪ ಹರಿಕಾಂತ ಅವರ ಮನೆಯ ನಾಯಿ ಮರಿ ಬೆಳಗಿನ ಜಾವ ಕಿರುಚಿಕೊಂಡಿದ್ದು ಕೇಳಿ ಮನೆಯವರು ಹೊರಗೆ ಬಂದು ನೋಡಿದರು. ಆಗ ನಾಯಿ ಪಂಜರದ ಮೂಲೆಯಲ್ಲಿ ಕುಳಿತು ಚಿರತೆ ಗರ್ಜಿಸುತ್ತಿರುವ ದೃಶ್ಯ ಕಂಡು ಬಂದಿದೆ.

ತುಂಬಾ ಜನರು ಸೇರಿರುವುದನ್ನು ಕಂಡು ಭಯಗೊಂಡ ಚಿರತೆ ನಾಯಿಗೆ ಏನೂ ಮಾಡದೆ ಸುಮ್ಮನೆ ಕುಳಿತಿತ್ತು. ಅರಣ್ಯ ಇಲಾಖೆಗೆ ಮಾಹಿತಿ‌ ನೀಡಿದಾಗ ಸಿಬ್ಬಂದಿ ಬಂದು ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದರು’ ಎಂದು ಹಿರೇಗುತ್ತಿ ವಲಯ ಅರಣ್ಯ ಅಧಿಕಾರಿ ನರೇಶ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಟ್ರಾಫಿಕ್ ಸಿಗ್ನಲ್ ನಲ್ಲಿ ಡಾನ್ಸ್ ಮಾಡಿ ಸಂಕಷ್ಟಕ್ಕೀಡಾದ ಯುವತಿ!

ಯಾದಗಿರಿ ಪ್ರಕರಣಕ್ಕೆ ತಿರುವು: ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ, ಸಾಮೂಹಿಕ ಅತ್ಯಾಚಾರವೂ ನಡೆದಿತ್ತು!

ಬಿಗ್ ಬ್ರೇಕಿಂಗ್ ನ್ಯೂಸ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ

ಮಕ್ಕಳಿಗೆ ಎರಡು ದಿನಗಳಿಗಿಂತ ಹೆಚ್ಚುಕಾಲ ಕೊವಿಡ್ ಲಕ್ಷಣಗಳಿದ್ದರೆ ತಪ್ಪದೇ ಪರೀಕ್ಷೆ ನಡೆಸಿ

ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!

ದೇವಸ್ಥಾನ ತೆರವು ವಿಚಾರ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಮಂಗಳೂರು: ನಿಫಾ ವೈರಸ್ ಶಂಕೆ ಇದ್ದ ಯುವಕನ ಪರೀಕ್ಷೆ ವರದಿ ನೆಗೆಟಿವ್ | ಆರೋಗ್ಯಾಧಿಕಾರಿ

ಇತ್ತೀಚಿನ ಸುದ್ದಿ