ಬೇಟೆಗಾರರ ಗುಂಡೇಟಿಗೆ ಕಡವೆ ಬಲಿ: ಮಲಯಮಾರುತ ಬಳಿ ಘಟನೆ
ಕೊಟ್ಟಿಗೆಹಾರ: ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಾರ್ಮಾಡಿ ಘಾಟ್ ನ ಮಲಯಮಾರುತ ಬಳಿ ಬುಧವಾರ ನಡೆದಿದೆ.
ಶಿಕಾರಿ ಮಾಡುವವರ ಗುಂಡಿಗೆ ಕಡವೆ ಬಲಿಯಾಗಿರುವ ಸಾಧ್ಯತೆ ಇದ್ದು ಬುಧವಾರ ಚಾರ್ಮಾಡಿ ಘಾಟ್ ನ ಮಲಯಮಾರುತದ ಬಳಿ ಹೆದ್ದಾರಿ ಬದಿಯ ಚರಂಡಿಯಲ್ಲಿ ಕಡವೆ ಮೃತದೇಹ ಪತ್ತೆಯಾಗಿದೆ. ಕಡವೆಯ ಕಿವಿ, ತೊಡೆ, ಹೊಟ್ಟೆ ಭಾಗದಲ್ಲಿ ಗುಂಡು ತಗುಲಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ವರ್ಷದ ಕಡವೆ ಇದಾಗಿದ್ದು ಚಾರ್ಮಾಡಿ ಘಾಟ್ ಹೆದ್ದಾರಿ ಮಾರ್ಗವಾಗಿ ಪ್ರಯಾಣಿಸುವ ವಾಹನ ಚಾಲಕರು ಕಡವೆ ಮೃತದೇಹವನ್ನು ಕಂಡು ಕೊಟ್ಟಿಗೆಹಾರ ಅರಣ್ಯ ಚೆಕ್‌ಪೋಸ್ಟ್ಗೆ ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw