ಗ್ರಾಹಕನ ಮುಖ ಕೆಂಪಗಾಗಿಸಿದ ವೀಳ್ಯದೆಲೆ: ಒಂದು ಕಟ್ಟು ವೀಳ್ಯದೆಲೆಗೆ 150 ರೂ.! - Mahanayaka
12:06 PM Wednesday 5 - February 2025

ಗ್ರಾಹಕನ ಮುಖ ಕೆಂಪಗಾಗಿಸಿದ ವೀಳ್ಯದೆಲೆ: ಒಂದು ಕಟ್ಟು ವೀಳ್ಯದೆಲೆಗೆ 150 ರೂ.!

betel leaf
20/01/2022

ಚಿಕ್ಕಬಳ್ಳಾಪುರ: ವೀಳ್ಯದೆಲೆ ಬಾಯಿ ಕೆಂಪಗಾಗಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ, ಇದೀಗ ವೀಳ್ಯದೆಲೆಯ ಬೆಲೆ ಗ್ರಾಹಕನ ಮುಖ ಕೆಂಪಗಾಗುವಂತೆ ಮಾಡಿದೆ.

ಹೌದು…! ವೀಳ್ಯದೆಲೆಯ ಬೆಲೆ ಮಾರುಕಟ್ಟೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದು, ಗ್ರಾಹಕನಿಗೆ ದೊಡ್ಡ ಶಾಕ್ ನೀಡಿದೆ. ಈ ಹಿಂದೆ ವೀಳ್ಯದೆಲೆ 50-60 ರೂಪಾಯಿಯೊಳಗೆ ಗ್ರಾಹಕನ ಕೈಗೆ ಸಿಗುತ್ತಿತ್ತು. ಆದರೆ, ಇದೀಗ ಒಂದು ಕಟ್ಟು ವೀಳ್ಯದೆಲೆಯ ಬೆಲೆ 150ರಿಂದ 160ರವರಗೆ ಏರಿಕೆಯಾಗಿದೆ.

ಮದುವೆ ಸಮಾರಂಭ ಮೊದಲಾದ ಶುಭ ದಿನಗಳಲ್ಲಿ ವೀಳ್ಯದೆಲೆ ಬಹಳ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೀಳ್ಯದೆಲೆ ತಿನ್ನುವವರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿಯೇ ಇರುತ್ತದೆ. ಆದರೆ, ಇದೀಗ ವೀಳ್ಯದೆಲೆಯ ಬೆಲೆ ಕೂಡ ಗಗನಕ್ಕೇರಿದ್ದು, ವೀಳ್ಯದೆಲೆ ಬೆಲೆ ಕೇಳಿ ಜನರು ಗಾಬರಿಗೊಳಗಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಕಲಾವಿದ ರಸ್ತೆ ಅಪಘಾತಕ್ಕೆ ಬಲಿ

ಕಿರಾತಕ ಚಿತ್ರದ ನಿರ್ದೇಶಕ, 46 ವರ್ಷದ ವಯಸ್ಸಿನ ಪ್ರದೀಪ್ ರಾಜ್ ನಿಧನ

ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಬಿಜೆಪಿ ಮುಖಂಡ!

ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು

ನಟಿ ದಿವ್ಯಾ ಸುರೇಶ್ ಗೆ ಅಪಘಾತ: ಕೈ, ಕಾಲು, ಮುಖಕ್ಕೆ ಗಂಭೀರ ಗಾಯ

ಇತ್ತೀಚಿನ ಸುದ್ದಿ