ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಭಾರತೀಯ ಸೇನೆ
ಪಾಲಕ್ಕಾಡ್: ಟ್ರೆಕ್ಕಿಂಗ್ ಹೋಗಿ ಕೇರಳದ ಮಲಂಪುಳ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಭಾರತೀಯ ಸೇನೆ ಸತತ ಕಾರ್ಯಾಚರಣೆ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಮಲಂಪುಳದ ಬಾಬು (23) ಎಂಬ ಯುವಕ, ಸೋಮವಾರ (ಫೆ.8) ಮೂವರು ಸ್ನೇಹಿತರ ಜೊತೆಗೆ ಚಾರಣಕ್ಕೆ ತೆರಳಿದ್ದನು. ಈ ವೇಳೆ ಮಾರ್ಗ ಮಧ್ಯೆ ಕಾಲು ಜಾರಿ ಕಡಿದಾದ ಬೆಟ್ಟದ ನಡುವೆ ಸಿಲುಕಿದ್ದನು. ಸುಮಾರು 1,000 ಮೀ. ಎತ್ತರದ ಬೆಟ್ಟ ಇದಾಗಿದ್ದು, ಕಳೆದೆರಡು ದಿನಗಳಿಂದ ನೀರು, ಆಹಾರ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದನು.
ಈ ವಿಚಾರ ತಿಳಿದ ಸ್ಥಳೀಯ ಆಡಳಿತದ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವ ಪ್ರಯತ್ನ ಪ್ರತಿಕೂಲ ಹವಾಮಾನದಿಂದಾಗಿ ವಿಫಲಗೊಂಡಿತ್ತು. ಅಲ್ಲದೆ ಡ್ರೋನ್ ಮೂಲಕ ಯುವಕನಿಗೆ ಆಹಾರ ತಲುಪಿಸುವ ಪ್ರಯತ್ನ ಕೂಡ ವಿಫಲಗೊಂಡಿತ್ತು. ಅಂತಿಮವಾಗಿ ಮಂಗಳವಾರ ರಾತ್ರಿ ಕೇರಳ ಸರ್ಕಾರದ ಮನವಿ ಮೇರೆಗೆ ಭಾರತೀಯ ಸೇನೆಯು ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.ಯುವಕನನ್ನು ರಕ್ಷಿಸಿದ ಬಳಿಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಬಿಜೆಪಿ ಕಾರಣ: ಧ್ರುವನಾರಾಯಣ
ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ: ಪ್ರಿಯಾಂಕಾ ಗಾಂಧಿ
ಮಹಿಳೆಯರು ಹಾಕುವ ಬಟ್ಟೆಯಿಂದ ಪುರುಷರು ಉದ್ರೇಕವಾಗುತ್ತಾರೆ: ರೇಣುಕಾಚಾರ್ಯ
ಎಟಿಎಂಗೆ ಹಾನಿ ಮಾಡಿ ಹಣ ಕಳವಿಗೆ ಯತ್ನ: ಆರೋಪಿಯ ಬಂಧನ
ಇಂಟರ್ವ್ಯೂ ಮುಗಿಸಿ ಬರುತ್ತಿದ್ದವನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ: ಯುವಕನ ಕುತ್ತಿಗೆಗೆ ಗಾಯ