ವರದಕ್ಷಿಣೆ ಕೊಡದಿದ್ದರೆ ಬೆತ್ತಲೆ ಚಿತ್ರ ವೈರಲ್ ಮಾಡುತ್ತೇನೆಂದ ಪತಿ: ಪತ್ನಿಯಿಂದ ದೂರು - Mahanayaka
7:28 AM Thursday 12 - December 2024

ವರದಕ್ಷಿಣೆ ಕೊಡದಿದ್ದರೆ ಬೆತ್ತಲೆ ಚಿತ್ರ ವೈರಲ್ ಮಾಡುತ್ತೇನೆಂದ ಪತಿ: ಪತ್ನಿಯಿಂದ ದೂರು

dowry
18/01/2022

ಶಿವಮೊಗ್ಗ: ವರದಕ್ಷಿಣೆ ಕೊಡದಿದ್ದರೆ ನಿನ್ನ ಬೆತ್ತಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಪತಿ ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ ಹೊಸ ನಗರ ತಾಲ್ಲೂಕಿನ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ನಿವಾಸಿಗಳಾದ ಪತಿ ಸಲ್ಮಾನ್, ಅತ್ತೆ ಸಾಹಿರಾ, ಮಾವ ಶೌಕತ್ ಖಾನ್, ನಾದಿನಿ ಸಮೀನಾ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಎಂಟು ತಿಂಗಳ ಹಿಂದೆ ಸಲ್ಮಾನ್ ಜೊತೆಗೆ ವಿವಾಹ ನಡೆದಿತ್ತು. ಆದರೆ ವರದಕ್ಷಿಣೆಯ ಹಣ ಪೂರ್ಣವಾಗಿ ಪಾವತಿಸಲಾಗಿರಲಿಲ್ಲ. 1 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲು ಬಾಕಿ ಇತ್ತು ಎನ್ನಲಾಗಿದೆ.

ಈ ಮಧ್ಯೆ ಸಲ್ಮಾನ್ ಪತ್ನಿ ನಗ್ನವಾಗಿರುವ ದೃಶ್ಯಗಳನ್ನು ವಿಡಿಯೋ ಚಿತ್ರೀಕರಿಸಿ, ಉಳಿದ ಹಣ ತರದಿದ್ದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಜೊತೆಗೆ ತಲಾಕ್ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಿಳೆ ತವರು ಮನೆಗೆ ಬಂದರೂ ಪತಿಯ ಮನೆಯವರಿಂದ ಬೆದರಿಕೆ ನಿಂತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಮೋದಿ ಹೇಳಿದ್ದಕ್ಕೆ ನಾನು ಮಾಸ್ಕ್ ಧರಿಸಿಲ್ಲ: ಉಮೇಶ್ ಕತ್ತಿ

ಕೊಳ್ಳೇಗಾಲ ಶಾಸಕ ಎನ್.ಮಹೇಶ್​​ಗೆ ಕೊರೊನಾ ಧೃಡ

ಶಿಕ್ಷಕಿಗೆ ಅವಹೇಳನಾಕಾರಿ ಗಿಫ್ಟ್ ನೀಡಿದ ಮನೆ ಮಾಲಿಕ: ಆರೋಪಿ ವಿರುದ್ಧ ಎಫ್ ಐಆರ್

ರಜನಿ ಪುತ್ರಿ ಐಶ್ವರ್ಯಾ ಜೊತೆಗಿನ 18 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ ನಟ ಧನುಷ್

ಇತ್ತೀಚಿನ ಸುದ್ದಿ