ದೇವಸ್ಥಾನದ ಆವರಣದಲ್ಲಿಯೇ ತಲೆಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ದೇವಸ್ಥಾನದ ಆವರಣದಲ್ಲಿಯೇ ವ್ಯಕ್ತಿಯ ತತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಅಫಜಲಪುರ ತಾಲೂಕಿನ ಭಾಸಗಿ ಗ್ರಾಮದ ನಿವಾಸಿ ನಾಗಪ್ಪ ರುದ್ನೋಡಗಿ (38) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ನಾಗಪ್ಪನಿಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ. ಸುಮಾರು ವರ್ಷಗಳ ಹಿಂದೆ ಮೊದಲನೇ ಪತ್ನಿಯನ್ನು ಬಿಟ್ಟು ಎರಡನೇ ಪತ್ನಿಯೊಂದಿಗೆ ನಾಗಪ್ಪ ವಾಸವಿದ್ದಾನೆ. ಇತ್ತೀಚಿಗೆ ತವರು ಮನೆಗೆ ತೆರಳಿದ್ದ ಎರಡನೇ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿ ಬರುವುದಾಗಿ ಮನೆಯವರಿಗೆ ಹೇಳಿ ಮಹಿಬೂಬ್ ಎಂಬಾತನ ಬೈಕ್ ನಲ್ಲಿ ಇಬ್ಬರು ತೆರಳಿದ್ದರು.
ಆದರೆ, ಮಾರ್ಗ ಮಧ್ಯೆ ಬರುವ ಮಣ್ಣೂರ ದೇವಸ್ಥಾನದ ಯಾತ್ರಿಕ ನಿವಾಸದ ಮುಂದೆ ನಾಗಪ್ಪನ ಕೊಲೆಯಾಗಿದ್ದು, ಸ್ಥಳದಲ್ಲಿ ಮಹಿಬೂಬ್ ಗೆ ಸೇರಿದ ಬೈಕ್ ಕೂಡ ಪತ್ತೆಯಾಗಿದೆ. ಹೀಗಾಗಿ ನಾಗಪ್ಪನನ್ನು ಕೊಲೆ ಮಾಡಿ ಮಹಿಬೂಬ್ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಬ್ಬಿಣ ಅದಿರು ಅಕ್ರಮ ಸಾಗಾಟ: 8 ಮಂದಿ ಆರೋಪಿಗಳ ಬಂಧನ
ಮಹಿಳೆಯರ ಹಕ್ಕುಗಳ ರಕ್ಷಕ: ಬಾಬಾಸಾಹೇಬ್ ಡಾ.ಅಂಬೇಡ್ಕರ್
ಬಜೆಟ್ ನಲ್ಲಿ ವಿಶ್ವಕರ್ಮ ಸಮಾಜದ ನಿರ್ಲಕ್ಷ್ಯ: ಸರ್ಕಾರದ ವಿರುದ್ಧ ಆಕ್ರೋಶ
500 ರೂ. ಕೀ ಪ್ಯಾಡ್ ಫೋನ್ ಗಾಗಿ ವ್ಯಕ್ತಿಯ ಕೊಲೆ
ರಷ್ಯಾ ಸೇನೆಯಿಂದ ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆ ಧ್ವಂಸ