ಎಚ್ಚರ ಇರಲಿ: ಆಧಾರ್ ಕಾರ್ಡ್ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ

ಆಧಾರ್ ಕಾರ್ಡ್ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ ನಡೆಯುತ್ತಿವೆ. ಹೀಗಾಗಿ ಯಾರಿಗೂ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕೊಡಬೇಡಿ.
ಇಲ್ಲಿ ನೋಡಿ ಬೀದಿಯಲ್ಲಿ ಮೊಟ್ಟೆ ವ್ಯಾಪಾರ ಬಡ ಯುವಕನಿಗೆ 6 ಕೋಟಿ ರೂ. ತೆರಿಗೆ ನೋಟಿಸ್ ಬಂದಿದೆ. ಈ ಘಟನೆ ಮಧ್ಯಪ್ರದೇಶದ ದಾಮೋಹ್ನಲ್ಲಿ ನಡೆದಿದೆ. ದೇಶಾದ್ಯಂತ ಇಂತಹ ಅನೇಕ ಪ್ರಕರಣಗಳು ನಡೆದಿವೆ.
ಮೊಟ್ಟೆ ವ್ಯಾಪಾರಿ ಪ್ರಿನ್ಸ್ ಹೆಸರಿನಲ್ಲಿ ದೆಹಲಿಯಲ್ಲಿ ಕಂಪನಿ ಇದೆ ಎಂದು ಜಿಎಸ್‌ಟಿ ಇಲಾಖೆ ಕಳುಹಿಸಿರುವ ನೋಟಿಸ್‌ನಲ್ಲಿ ಹೇಳಲಾಗಿದೆ. ಈ ಕಂಪನಿಯ ಹೆಸರಿನಲ್ಲಿ ಸುಮಾರು 50 ಕೋಟಿ ರೂಪಾಯಿ ವಹಿವಾಟು ಕೂಡ ನಡೆದಿದ್ದು, ಸುಮಾರು 6 ಕೋಟಿ ರೂ. ಜಿಎಸ್‌ಟಿ ಪಾವತಿ ಬಾಕಿ ಇರುವುದಾಗಿ ಮತ್ತು ಅದನ್ನು ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ನೋಟಿಸ್ನಿಂದಾಗಿ ಪ್ರಿನ್ಸ್ ಸೇರಿದಂತೆ ಇಡೀ ಕುಟುಂಬ ಚಿಂತಿತವಾಗಿದೆ. ಈ ವಿಷಯದ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಎಸ್ಪಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಅಂದಹಾಗೆ ದಾಮೋಹ್‌ನ ಪಥಾರಿಯಾದ ವಾರ್ಡ್ ಸಂಖ್ಯೆ 14ರಲ್ಲಿ ಪ್ರಿನ್ಸ್ ವಾಸವಿದ್ದಾರೆ. ಪ್ರಿನ್ಸ್, ಒಂದು ಬಂಡಿ ಹಾಕಿಕೊಂಡು ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಮಾರ್ಚ್ 18ರಂದು ಅವರ ಹೆಸರಿಗೆ ನೋಂದಾಯಿತ ಅಂಚೆ ಬಂದಿತು.
ಪ್ರಿನ್ಸ್ ರ ಆಧಾರ್ ಕಾರ್ಡ್ ಪಡೆದುಕೊಂಡು. ಅದರ ಮೂಲಕ ಕಂಪನಿಯನ್ನು ಅಕ್ರಮವಾಗಿ ರಚಿಸಿದ್ದರು ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj