ಬಾಂಬೆಯಲ್ಲಿ ಭಗವದ್ಗೀತೆ ಓದಿ.. ಯೋಗಾ ಮಾಡಿದ್ರಾ? | ಬಿಜೆಪಿ ನಾಯಕರಿಗೆ ರಮೇಶ್ ಕುಮಾರ್ ಟಾಂಗ್
ಶಿವಮೊಗ್ಗ: ಆ ಸಿಡಿ ನಕಲಿಯೋ ಅಸಲಿಯೋ ಗೊತ್ತಿಲ್ಲ, ಆದರೆ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಹೇಳಿಕೊಂಡು ಬಿಜೆಪಿಯವರು ಇಂತಹ ಕೆಲಸ ಮಾಡಿದ್ದಾರೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಅವರು, ಬಾಂಬೆಯಲ್ಲಿ ನೀವು ಭಗವದ್ಗೀತೆ ಓದಿ.. ಯೋಗಾ ಮಾಡಿದ್ರಾ? ಎಂದು ಸಿಡಿ ವಿಚಾರವಾಗಿ ಬಿಜೆಪಿ ನಾಯಕರಿಗೆ ರಮೇಶ್ ಕುಮಾರ್ ಟಾಂಗ್ ನೀಡಿದರು.
ಈ ವಿಚಾರವಾಗಿ ಪ್ರಕರಣ ದಾಖಲಿಸಲು ಎಸ್ ಐಟಿಗೆ ಯಾವುದೇ ಅಧಿಕಾರವಿಲ್ಲ. ಕೋರ್ಟ್ ವಿಶೇಷ ತನಿಖಾ ತಂಡ ರಚಿಸಿದ್ದರೆ ಮಾತ್ರವೇ ಅವಕಾಶವಿದೆ. ಕೇಸ್ ದಾಖಲಿಸಲು ವಿಶೇಷ ತನಿಖಾ ತಂಡಕ್ಕೆ ಮಾತ್ರವೇ ಅವಕಾಶವಿದೆ ಎಂದು ಇದೇ ಸಂದರ್ಭದಲ್ಲಿ ರಮೇಶ್ ಕುಮಾರ್ ಹೇಳಿದರು.
ಇನ್ನೂ ದೇಶದಲ್ಲಿ ಪ್ರಸ್ತುತ ಮಾಧ್ಯಮ ಕ್ಷೇತ್ರವೂ ಸಂಕಷ್ಟದಲ್ಲಿದೆ. 105 ದಿನಗಳಿಂದ ರೈತರು ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆಹೋರಾತ್ರಿ ಪ್ರತಿಭಟನಾ ನಿರತ 200 ರೈತರು ಮೃತಪಟ್ಟಿದ್ದಾರೆ. ರೈತರ ಹೋರಾಟ, ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿಲ್ಲ. ಸ್ವತಂತ್ರ ಭಾರತದಲ್ಲಿ ಇಂತಹದ್ದೊಂದು ಹೋರಾಟವೇ ನಡೆದಿರಲಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.