ಇಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್  2ನೇ ವಿವಾಹ - Mahanayaka
5:12 PM Wednesday 11 - December 2024

ಇಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್  2ನೇ ವಿವಾಹ

bhagwant mann marriage
07/07/2022

ಪಂಜಾಬ್  ಮುಖ್ಯಮಂತ್ರಿ ಭಗವಂತ್ ಮಾನ್  ಇಂದು 2ನೇ  ಮದುವೆಯಾಗುತ್ತಿದ್ದಾರೆ.  48 ವರ್ಷದ ಮಾನ್ ಅವರು ಡಾ. ಗುರ್‌ ಪ್ರೀತ್ ಕೌರ್ ಎಂಬವರನ್ನು  ವಿವಾಹವಾಗಲಿದ್ದಾರೆ.

ಚಂಡೀಗಢದ ನಿವಾಸದಲ್ಲಿ ಸರಳ ರೀತಿಯಲ್ಲಿ ಸಮಾರಂಭ ನಡೆಯಲಿದೆ.  ಮದುವೆಯಲ್ಲಿ ಕುಟುಂಬಸ್ಥರು ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಭಾಗವಹಿಸುತ್ತಾರೆ.  ಆಮ್  ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಭಗವಂತ್ ಮಾನ್ 6 ವರ್ಷಗಳ ಹಿಂದೆ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು.  ಈ ಸಂಬಂಧದಲ್ಲಿ  2 ಮಕ್ಕಳಿದ್ದಾರೆ.  ಅವರ ಮೊದಲ ಹೆಂಡತಿ ಮತ್ತು ಮಕ್ಕಳು ಯುನೈಟೆಡ್ ಸ್ಟೇಟ್ ನಲ್ಲಿ ವಾಸಿಸುತ್ತಿದ್ದಾರೆ.  ಮಾರ್ಚ್ 16 ರಂದು ಭಗವಂತ್ ಮಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.

ಭಗವಂತ್ ಮಾನ್ 2011ರಲ್ಲಿ ರಾಜಕೀಯ ಪ್ರವೇಶಿಸಿದ್ದರು.  ಅವರು 2014 ರಲ್ಲಿ ಎಎಪಿ ಟಿಕೆಟ್‌ ನಲ್ಲಿ ಮೊದಲ ಬಾರಿಗೆ ಸಂಗ್ರೂರ್‌ನಿಂದ ಸಂಸದರಾದರು.  2019ರ ಚುನಾವಣೆಯಲ್ಲಿ ಸಂಗ್ರೂರ್‌ ನಿಂದ ಗೆದ್ದಿದ್ದರು.  ಅವರು 2022 ರಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾದರು ಮತ್ತು ಭಾರೀ ಗೆಲುವು ಸಾಧಿಸಿದರು.  2014ರ ಚುನಾವಣೆಯಲ್ಲಿ ಅವರ ಮೊದಲ ಪತ್ನಿ ಇಂದರ್ಜಿತ್ ಕೌರ್ ಅವರ ಪ್ರಚಾರಕ್ಕೆ ಬಂದಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ